ನಾಡಿನ ಎಲ್ಲೆಡೆ ಸುಖ, ಶಾಂತಿ ನೆಲೆಸಲಿ

ಕೆ.ಆರ್.ನಗರದ ದಿವ್ಯ ಕರುಣೆಯ ದೇವಾಲಯದಲ್ಲಿ ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಕ್ರೈಸ್ತರಿಗೆ ಕೇಕ್ ವಿತರಣೆ ಮಾಡುವ ಮೂಲಕ ಕ್ರಿಸ್‌ಮಸ್ ಶುಭಾಶಯ ಕೋರಿದರು. ರಾಯಪ್ಪ, ನಟರಾಜ್, ಶಿವುನಾಯಕ್, ವಿನಯ್, ಪುಷ್ಪಾ, ರೀನಾ, ಪ್ರಿಯಲತಾ, ಫಿಲೀಪ್, ಕ್ರಿಸ್ಟಿ, ಜಾರ್ಜ್, ಪುಟ್ಟರಾಜ್, ಆದರ್ಶ್ ಇದ್ದರು.

Published on

ಕೆ.ಆರ್.ನಗರ: ವಿಶ್ವಕ್ಕೆ ಶಾಂತಿ ಸತ್ಯ ಸಂದೇಶ ಸಾರಿದ ಏಸುಕ್ತಿಸ್ತರ ಜನ್ಮ ಜಯಂತಿಯಾದ ಕ್ರಿಸ್‌ಮಸ್ ದಿನದಂದು ನಾಡಿನ ಎಲ್ಲೆಡೆ ಸುಖ, ಶಾಂತಿ ನೆಲೆಸಿ ಆರೋಗ್ಯ ವೃದ್ಧಿಯಾಗಲಿ ಎಂದು ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಸುಭಾಷ್ ನಗರದ ದಿವ್ಯ ಕರುಣೆಯ ದೇವಾಲಯದಲ್ಲಿ ಮಂಗಳವಾರ ಕ್ರೈಸ್ತ ಧರ್ಮ ಗುರು ಮತ್ತು ಕ್ರೈಸ್ತರಿಗೆ ಕೇಕ್ ವಿತರಣೆ ಮಾಡುವ ಮೂಲಕ ಕ್ರಿಸ್‌ಮಸ್ ಶುಭಾಶಯ ಕೋರಿ ಮಾತನಾಡಿದ ಅವರು, ಶಾಂತಿದೂತ ಏಸುಕ್ರಿಸ್ತರ ಜನ್ಮ ದಿನದಂದು ಎಲ್ಲೆಡೆ ಸಡಗರ ಸಂಭ್ರಮ ತುಂಬಲಿ ಎಂದರು.

ಪ್ರತಿಯೊಬ್ಬರಿಗೂ ಅವರ ಧರ್ಮವೇ ಶ್ರೇಷ್ಠ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲರೂ ಹಬ್ಬವನ್ನು ಆಚರಿಸುತ್ತಾರೆ. ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬ ಪ್ರಮುಖವಾಗಿದ್ದು ವಿಶ್ವಾದ್ಯಂತ ಆಚರಿಸಲಾಗುತ್ತದೆ ಎಂದರು.

ದಿವ್ಯ ಕರುಣೆಯ ದೇವಾಲಯದ ಧರ್ಮಗುರು ರಾಯಪ್ಪ ಮಾತನಾಡಿದರು. ಇದೇ ವೇಳೆ ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಮತ್ತು ಪುರಸಭಾ ಸದಸ್ಯ ನಟರಾಜು ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ಪುರಸಭಾ ಸದಸ್ಯ ಶಿವುನಾಯಕ್, ಮಾಜಿ ಸದಸ್ಯ ವಿನಯ್, ಚರ್ಚ್‌ನ ಸಿಸ್ಟರ್‌ಗಳಾದ ಪುಷ್ಪಾ, ರೀನಾ, ಪ್ರಿಯಲತಾ, ಮುಖಂಡರಾದ ಫಿಲೀಪ್, ಕ್ರಿಸ್ಟಿ, ಜಾರ್ಜ್, ಪುಟ್ಟರಾಜ್, ಆದರ್ಶ್, ವೆಂಕಟೇಶ್, ಎಂ.ಎ.ನಾಗೇಂದ್ರ, ಕುಮಾರ್, ಗೌತಮ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net