ಸಾಮಾಜಿಕ ಮೌಲ್ಯಗಳ ಪುನರುತ್ಥಾನವಾಗಲಿ

2MDG2 UPANYASA
Published on

ಮುಂಡರಗಿ: ಅತ್ಯಂತ ಕಲುಷಿತವಾಗಿರುವ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಸ್ತುತ ದಿನಮಾನಗಳಲ್ಲಿ ಮತ್ತೊಮ್ಮೆ ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ಮೌಲ್ಯಗಳ ಪುನರುತ್ಥಾನವಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಆರ್.ಕೆ. ರಾಯನಗೌಡರ ಹೇಳಿದರು.

ಪಟ್ಟಣದಲ್ಲಿ ತಾಲೂಕು ಶಸಾಪ, ಕಸಾಪ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲಿಕೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕ ಕುಮಾರ ಜೆ., ಮಾತನಾಡಿ, ಹರಳಯ್ಯನವರು ಜಾತಿ ಹಾಗೂ ಕುಲಗಳನ್ನು ಮೀರಿ ಶರಣ ಗಣದಲ್ಲಿ ಗುರುತಿಸಿಕೊಂಡರು. ಕಾಯಕ ಹಾಗೂ ದಾಸೋಹ ನಿಷ್ಠೆಯುಳ್ಳ ಹರಳಯ್ಯ ಶರಣ ಕುಲತಿಲಕರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕ ಶಸಾಪ ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ಶರಣರ ಬದುಕು ಮತ್ತು ವಚನಗಳ ಬರಹ ನಮಗೆ ತೋರು ದೀಪವಾಗಿವೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಇತರರು ಇದ್ದರು. ನಯನಾ ಅಳವಂಡಿ ಪ್ರಾರ್ಥನೆ ಹಾಡಿದರು. ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾ ಕಾಗನೂರಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net