ಸಾಧಕರಿಗೆ ಸ್ಪೂರ್ತಿ ತುಂಬುವ ಕೆಲಸವಾಗಲಿ

26-HNL-3
Published on

ಹಾನಗಲ್ಲ: ಪ್ರತಿಭಾವಂತರನ್ನು ಗೌರವಿಸುವ ಮೂಲಕ ಸಾಧಕರಿಗೆ ಸ್ಪೂರ್ತಿ ತುಂಬುವ ಕೆಲಸವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಹ್ಯುಮ್ಯಾನಿಟಿ ಫೌಂಡೇಷನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಟೀಮ್ ಆಪದ್ಬಾಂಧವ ಸಹಯೋಗದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರಾಜ್ಯ, ಜಿಲ್ಲಾ, ತಾಲೂಕು, ಶಾಲಾ ಮಟ್ಟದಲ್ಲಿ ಸಾಧನೆ ತೋರಿದ 350 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಟ್ಟು 5 ಲಕ್ಷ ರೂ ಮೊತ್ತದ ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ, ಕಲಿಕಾ ಪುಸ್ತಕ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದೇವೆ. ಸರ್ಕಾರದ ಅನುದಾನವನ್ನೂ ಹೊರತುಪಡಿಸಿ ತಾಲೂಕಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 95 ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ. ರೋಟರಿ ಸಂಸ್ಥೆ ಕೂಡ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೈ ಜೋಡಿಸಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರೌಢ, ಪ್ರಾಥಮಿಕ ಶಾಲೆಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಸುಣ್ಣ ಬಣ್ಣ, ಮುದ್ರಣ ಯಂತ್ರ, ಜೆರಾಕ್ಸ್ ಯಂತ್ರ, ಗ್ರೀನ್ ಬೋರ್ಡ, ಡೆಸ್ಕ್, ವಾಟರ್‌ಫಿಲ್ಟರ್, 52 ಶಾಲೆಗಳಿಗೆ ಪ್ರೊಜೆಕ್ಟರ್ ಹಾಗೂ ಸ್ಕ್ರೀನ್‌ಗಳನ್ನು ಒದಗಿಸಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅದಿತಿ ಹಾವಣಗಿ, ವರ್ಷಿಣಿ ಹಳ್ಳೇರ, ಕವಿತಾ ಹಾವಳೇರ ಮಾತನಾಡಿದರು. ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ಮೆಹಬೂಬಲಿ ಬ್ಯಾಡಗಿ, ಅನಿತಾ ಶಿವೂರ, ಬಸವರಾಜ ಚಹ್ವಾಣ, ಬಿ.ಎಸ್. ಕರಿಯಣ್ಣನವರ, ಅಬ್ದುಲ್‌ರಜಾಕ ಪಟೇಲ್, ಹೆಗ್ಗಪ್ಪ ಕಾಮನಹಳ್ಳಿ, ಚಂದ್ರಶೇಖರ ಬಳ್ಳಾರಿ, ಚಂದ್ರಶೇಖರ ಗೂಳಿ ಇದ್ದರು. ಸಿದ್ದು ಗೌರಣ್ಣನವರ ನಿರೂಪಿಸಿದರು.

ಫೋಟೋ : 26-ಎಚ್‌ಎನ್‌ಎಲ್-3

ಶೀರ್ಷಿಕೆ : ಹಾನಗಲ್ಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಶ್ರೀನಿವಾಸ ಮಾನೆ, ವಿ.ವಿ.ಸಾಲಿಮಠ, ಮಾರುತಿ ಶಿಡ್ಲಾಪೂರ, ಮೆಹಬೂಬಲಿ ಬ್ಯಾಡಗಿ, ಅನಿತಾ ಶಿವೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net