

ಹುಕ್ಕೇರಿ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು. ತಾಲೂಕಿನ ಎಲಿಮುನ್ನೋಳಿ ಗ್ರಾಮದ ಸಂಕನ್ನವರ ತೋಟದಲ್ಲಿ ಅಂಗನವಾಡಿ ಕಟ್ಟಡಕ್ಕೆ ಗುರುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕಿನ ಗುಡಸ, ರಕ್ಷಿ, ಎಲಿಮುನ್ನೋಳಿ ಮತ್ತು ನಿಡಸೋಸಿವಾಡಿ ಗ್ರಾಮಗಳಲ್ಲಿ 4 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 72 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು. ಹಡಲಗಾ ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದ ಕೆರೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಎಲಿಮುನ್ನೋಳಿ ಗ್ರಾಪಂ ಅಧ್ಯಕ್ಷ ಮೀರಾಸಾಬ್ ಮುಲ್ತಾನಿ, ಮುಖಂಡರಾದ ಕೆಂಪಣ್ಣ ವಾಸೇದಾರ, ಭೀಮಗೌಡ ಗಿರಿಗೌಡನವರ, ಶಶಿಕಾಂತ ದೊಡ್ಡಲಿಂಗನವರ, ಜಿನಗೌಡ ಇಮಗೌಡನವರ, ಅಣ್ಣಪ್ಪ ಹಿಟ್ಟಣಗಿ, ಕಲಗೌಡ ಮಲಗೌಡನವರ, ಮಹಾಂತೇಶ ಮಗೆನ್ನವರ, ಸುನೀಲ ನೇರ್ಲಿ, ದಯಾನಂದ ಅಮ್ಮಣಗಿ, ಸದಾನಂದ ಹಿರೇಮಠ, ಮಲ್ಲಿಕಾರ್ಜುನ ನರಸನ್ನವರ, ಶಿವಣಪ್ಪ ನೇರ್ಲಿ, ಮಹೇಶ ಬಡಗಾಂವಿ, ಇಂಜಿನಿಯರ್ ಎಸ್.ಐ. ಭೂಸಗೋಳ ಇತರರಿದ್ದರು.