

ಕುಮಟಾ: ಧರ್ಮ-ದೈವ ನಿಷ್ಠರಲ್ಲದವರ ಮೇಲೆ ಕಾಲಚಕ್ರ ಸದಾ ತಿರುಗಿದರೆ, ಧರ್ಮ ಹಾಗೂ ಗುರು ನಿಷ್ಠರ ತಲೆಯ ಮೇಲೆ ಸದಾ ಕರುಣಾಚಕ್ರ ತಿರುಗುತ್ತಿರುತ್ತದೆ. ನಮ್ಮ ಮೇಲೆ ಯಾವ್ಯಾವುದೋ ಗಾಳಿ ಬೀಸುತ್ತಿದೆ, ಎಲ್ಲೆಡೆ ಧರ್ಮದ ಗಾಳಿ ಬೀಸಬೇಕಿದೆ ಎಂದು ರಾಮಚಂದ್ರಪುರ ಮಠಾಧೀಶ ಶ್ರೀ ರಾಘವೇಶ್ವರ ಮ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಹೊಳೆಗದ್ದೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವಾರದಲ್ಲಿ ಸೋಮವಾರ ನೂತನ ಸಭಾಭವನ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು. ತಲೆಯ ಮೇಲೆ ತಾಯಿಯ ಕರುಣಾ ಚಕ್ರ ಇರಬೇಕೇ ಹೊರತು ಯಮನ ಕಾಲಚಕ್ರ ಇರಬಾರದು. ಸತ್ಯನಿಷ್ಠೆಗಳು ಬದುಕಿಗೆ ಮಾರ್ಗದರ್ಶಿಯಾಗುತ್ತವೆ. ದೂರದ ಮಂದಿರದಲ್ಲಿ ದೇವಿ ಅಮ್ಮನವರನ್ನು ಪೂಜಿಸಿ, ಮನೆಯಲ್ಲಿರುವ ಅಮ್ಮನಿಗೆ ಕಣ್ಣೀರು ಹಾಕಿಸುವುದು ಸರಿಯಲ್ಲ. ಸುಹಾಸಿನಿಯರು ಸಂತೋಷದಿಂದಿದ್ದರೆ ಮನೆ ಉದ್ಧಾರವಾಗುತ್ತದೆ ಎಂದು ಶಾಸ ಹೇಳುತ್ತದೆ. ಮಹಿಳೆಯರಿಗೆ ಗೌರವ ಸಲ್ಲಬೇಕು ಎಂದರು.
ಸಭಾಭವನಗಳಿಗೆ ಅತ್ಯಂತ ಮಹತ್ವವಿದೆ. ಸಭಾಭವನವೆಂದರೆ ಬಹಳಷ್ಟು ಜನರಿಗೆ ಜಾಗ ನೀಡುವಂತಹದ್ದಾಗಿದೆ. ಹಾಗೆಯೇ ನಮ್ಮ ಹದಯವೂ ಕೂಡ. ಅದರೆ, ನಮ್ಮ ಹದಯದ ಸಭಾಭವನ ಎಷ್ಟೊಂದು ಚಿಕ್ಕದಾಗಿದೆ ಎಂದರೆ, ನನ್ನ ಹೆಂಡತಿ-ಮಕ್ಕಳು ಮಾತ್ರ ಎನ್ನುವಂತಾಗಿದೆ. ಹೀಗಾಗಬಾರದು, ಸಭಾಭವನಗಳೂ ನಮ್ಮ ಹದಯದ ಧ್ಯೋತಕವಾಗಿ ಸರ್ವರಿಗೂ ಸದುಪಯೋಗವಾಗಬೇಕು. ತಾಯಿ ಶಾಂತಿಕಾ ಪರಮೇಶ್ವರಿ ಅಮ್ಮನವರ ಕರುಣೆ ಎಲ್ಲರ ಮೇಲಿರಲಿ ಎಂದು ಹರಸಿದರು.
ದೇವಸ್ಥಾನ ಸಮಿತಿಯಿಂದ ಗುರುಭಿಕ್ಷಾ ಸೇವೆ ಜರುಗಿತು. ಶ್ರೀಗಳಿಂದ ಶಾಸಕ ದಿನಕರ ಶೆಟ್ಟಿ ಆಶೀರ್ವಾದ ಮಂತ್ರಾಕ್ಷತೆ ಸ್ವೀಕರಿಸಿದರು. ಸಭಾಭವನ ಸಮಿತಿ ಅಧ್ಯಕ್ಷ ನಾಗರಾಜ ಜೋಶಿ, ವೇ. ವಿನಾಯಕ ಡಿ. ಜೋಶಿ, ಸಭಾಭವನ ಸಮಿತಿ ಸದಸ್ಯರು, ಯುವ ಸೇವಾ ಸಮಿತಿ, ಕುಳಾವಿ ಭಜಕರು, ಭಕ್ತಾದಿಗಳು ಉಪಸ್ಥಿತರಿದ್ದರು.