ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯಲಿ

2RAIBAG1A
Published on

ರಾಯಬಾಗ: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ತಾಲೂಕಿನ ಮೇಖಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ 4 ಕೊಠಡಿ, ಗ್ರಂಥಾಲಯ, ಗಣಕಯಂತ್ರ ಕೊಠಡಿ ಹಾಗೂ ಜಲಕುಂಭ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಗ್ರಂಥಾಲಯದ ವಿವಿಧ ಕಾರ್ಯಗಳಿಗೆ 71 ಸಾವಿರ ರೂ. ದೇಣಿಗೆ ನೀಡಿದ ಅಡುಗೆ ನೌಕರ ಪ್ರೇಮಾ ಕರಗಾಂವೆ ದಂಪತಿಯನ್ನು ಸತ್ಕರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್., ಮುಖ್ಯಶಿಕ್ಷಕ ಸಂತೋಷ ಬಸನಾಯ್ಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನೂರ್‌ಅಹ್ಮದ್ ಕುಡಚಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸಂಜಯ ಒಡೆಯರ, ವಿವೇಕ ಹಟ್ಟಿಕರ, ಪಿ.ಎ.ನಾಯಿಕ, ಸದಾಶಿವ ಘೋರ್ಪಡೆ, ರಾಜು ನಾಯಿಕ, ಸುನೀಲ ಕಿಚಡೆ, ಶ್ರೀಧರ ಕಿಚಡೆ, ಮಾರುತಿ ನಾಯಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net