

ಸರಗೂರು: ಎಚ್.ಡಿ.ಕೋಟೆ ಮತ್ತು ಸರಗೂರು ಹಿಂದುಳಿದ ತಾಲೂಕಿನ ಅಣೆಪಟ್ಟಿ ಕಟ್ಟಿಕೊಂಡಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮೂಲಕ ಈ ಆಪಾದನೆ ದೂರಾಗಿಸಬೇಕು ಎಂದು ಶಾಂತಿಪುರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶರತ್ ಕಿವಿಮಾತು ಹೇಳಿದರು.
ತಾಲೂಕಿನ ತುಂಬಸೋಗೆ ಎಂ.ಎಂ.ಕೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ದಿನಕ್ಕೆ ಸುಮಾರು 12 ಗಂಟೆ ಕಾಲ ಓದಬೇಕು. ಯಾವುದೇ ವಿಷಯವನ್ನು ಆದರೂ ಇಷ್ಟಪಟ್ಟು ಓದಬೇಕು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಸತತ ಪ್ರಯತ್ನದ ಜತೆಗೆ ವಿದ್ಯಾರ್ಥಿಗಳಿಗೆ ಆರೋಗ್ಯವೂ ಮುಖ್ಯ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೀವನದಲ್ಲಿ ಏನಾದರೂ ಸಾಧಿಸಿ ದೇಶಕ್ಕೆ ಉತ್ತಮ ಪ್ರಜೆ ಆಗಬೇಕು ಎಂದು ಸಲಹೆ ನೀಡಿದರು.
ಬಿಚನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕಾಳಿಂಗೇಗೌಡ, ಪೊಲೀಸ್ ಇಲಾಖೆಯಲ್ಲಿ ಎರಡು ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ರಮೇಶ ರಾವ್, ಅಬಕಾರಿ ಅಧಿಕಾರಿ ಅಬ್ಜಲ್ ಹಾಗೂ ಸರಗೂರು ಸರ್ಕಾರ ಆಸ್ಪತ್ರೆಯ ರಾಜಮ್ಮ ಅವರನ್ನು ಅಭಿನಂದಿಸಲಾಯಿತು.
ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪಡೆದ ವಿಜ್ಞಾನ ವಿಭಾಗದ ಖುಷಿ, ಕೆ.ಎಸ್ ಪ್ರತಿಮಾ, ಅನನ್ಯಾ, ಯುಕ್ತಿ, ಕಲಾವಿಭಾಗದಲ್ಲಿ ನಾಗಲಕ್ಷ್ಮೀ ಹಾಗೂ ವಾಣಿಜ್ಯ ವಿಭಾಗದಲ್ಲಿ ಯದು ನಂದನ್, ಇಂದುಶ್ರೀ ಸೇರಿಂದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಚಂದ್ರೆಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಿಡಿಸಿ ಅಧ್ಯಕ್ಷ ಮೋಹನ್, ಎಂ.ಎಂ.ಕೆ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಜಾನ್ ಬಾಸ್ಕೊ, ಉಪನ್ಯಾಸಕರಾದ ವಿರೂಪಾಕ್ಷ, ಸಿದ್ದರಾಜು, ಸಿದ್ದಾರ್ಥ, ಪ್ರಸನ್ನ, ಕೆ .ಆರ್.ಸತೀಶ್ ಕುಮಾರ್, ಮೋಹನ್, ಮನೋಜ್, ಮಾದೇವಿ, ಧನುಜ, ಸುಪ್ರಿಯಾ, ಮುಸ್ಕಾನ್ ಬಾನು, ಸೌಜನ್ಯಾ, ಸಿಂಧು, ಭಾಗ್ಯಾ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಸುಧೀರ್, ಸಕಲೇಶ್, ವೈದ್ಯನಾಥ್, ಅಶೋಕ್ ಭಾಗವಹಿಸಿದ್ದರು.