

ನುಗ್ಗೇಹಳ್ಳಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡಿದ ಭಾರತೀಯ ಸೇನಾ ಪಡೆಗೆ ದೇವರು ಮತ್ತಷ್ಟು ಹೆಚ್ಚಿನ ಶಕ್ತಿ ನೀಡಲಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶನಿವಾರ ಹೋಬಳಿ ಕೇಂದ್ರ ಪ್ರಾರ್ಥಿಸಿದರು.
ವಿಶ್ವ ತಾಯಂದಿರ ದಿನದ ಅಂಗವಾಗಿ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಹೊಯ್ಸಳ ಕ್ರಿಕೆಟರ್ಸ್ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದರಿಂದ ದೇಶದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೈನಿಕರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.
ದೇಶದ ಭದ್ರತೆ ಬಹಳ ಮುಖ್ಯ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು. ಯುವಕರು ನಿತ್ಯ ಯೋಗ, ವ್ಯಾಯಾಮ ಮಾಡುವುದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಹೆಚ್ಚು ಶ್ರಮಪಡಬೇಕು ಎಂದು ತಿಳಿಸಿದರು.
ಇಂಗ್ಲೆಂಡ್ ದೇಶದಲ್ಲಿ ಕ್ರಿಕೆಟ್ ಪ್ರಾರಂಭವಾದರೂ ಸಹ ಭಾರತ ದೇಶದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಐಪಿಎಲ್ ಪಂದ್ಯಾವಳಿಗಳು ಆಪರೇಷನ್ ಸಿಂಧೂರದ ಕಾರಣ ರದ್ದಾಗಿವೆ. ಕ್ರೀಡಾಭಿಮಾನಿಗಳು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಆರ್. ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಕಾಂಗ್ರೆಸ್ ಮುಖಂಡ ಅವೇರಳ್ಳಿ ವೇಣುಗೋಪಾಲ್, ಮುಖಂಡರುಗಳಾದ ಉದ್ಯಮಿ ಜಗದೀಶ್, ಸಂಪತ್ ಕುಮಾರ್, ವಿಕ್ಟರ್, ಸೋಸಲ್ಗೆರೆ ಮಧು, ಸತೀಶ್, ಜಾವೇದ್, ಹಕ್, ಭುವನೇಶ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಕುಮಾರ್, ಮಂಜುನಾಥ ಸ್ವಾಮಿ, ಹೊನ್ನೇಗೌಡ, ನಟರಾಜ್ ಯಾದವ್, ಚಂದ್ರು, ಸುಹೀಲ್, ಹೊಯ್ಸಳ ಕ್ರಿಕೆಟ್ ಕ್ಲಬ್ ನ ಸುಮಂತ್ (ಅಚ್ಚು) ಪ್ರದೀಪ್, ದಿಲೀಪ್, ಚೇತನ್, ಹರ್ಷಿತ್, ಹೇಮಂತ್, ಇತರರು ಹಾಜರಿದ್ದರು. ಫೋಟೋ ಸುದ್ದಿ ನುಗ್ಗೇಹಳ್ಳಿ ಹೊಯ್ಸಳ ಕ್ರಿಕೆಟ್ ಕ್ಲಬ್ ನಿಂದ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಸಂಘದ ಸದಸ್ಯರುಗಳು ಅಭಿನಂದಿಸಿದರು.
ದೊರೆಸ್ವಾಮಿ, ತೋಟಿ ನಾಗರಾಜ್, ಪುಟ್ಟಸ್ವಾಮಿ, ಸಂಪತ್ ಕುಮಾರ್, ವಿಕ್ಟರ್, ಮಧು, ನಟರಾಜ್, ಹೊನ್ನೇಗೌಡ, ಸುಮಂತ್, ಪ್ರದೀಪ್, ಚೇತನ್, ಹರ್ಷಿತ್, ಹೇಮಂತ್, ಇದ್ದರು.