ಶುಶ್ರೂಷಕರ ಸೇವೆ ಸ್ಮರಿಸುವ ಕೆಲಸವಾಗಲಿ

SGN NETINGEL DADI DINA
Published on

ಶಿಗ್ಗಾಂವಿ: ಮನುಕುಲದ ಸೇವೆಗೆ ಎಲ್ಲವನ್ನು ತ್ಯಾಗ ಮಾಡಿದ ಮಾನವತಾವಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನೇ ಆದರ್ಶವನ್ನಾಗಿಟ್ಟುಂಡು ದಾದಿಯರೂ ಈಗಲೂ ಸೇವೆ ಮಾಡುತ್ತಿದ್ದಾರೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಞ ವೈದ್ಯೆ ಡಾ.ರೈಸಾ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್ ಇಂಟರ್ನ್ಯಾಷನಲ್ ಸಮೂಹ ಸಂಸ್ಥೆಯ ಬಿ.ಎಸ್.ಸಿ ನರ್ಸಿಂಗ್ ಕಾಲೇಜ್​ನಲ್ಲಿ ಸೋಮವಾರ ಫ್ಲಾರೆನ್ಸ್ ನೈಟಿಂಗಲ್ ಅವರ ದಿನಾಚರಣೆ ಅಂಗವಾಗಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೈಟಿಂಗಲ್ ಜನ್ಮ ದಿನದಂದು ಅವರ ನಿಸ್ವಾರ್ಥ ಸೇವೆ ಸ್ಮರಿಸುವುದರೊಂದಿಗೆ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರ ಸೇವೆಯನ್ನು ಸ್ಮರಿಸಲಾಗುತ್ತದೆ ಎಂದರು.

ನರ್ಸಿಂಗ್ ಕಾಲೇಜ ಪ್ರಾಂಶುಪಾಲ ಪ್ರಭು ಕೆ. ಮಾತನಾಡಿ, ರಶಿಯಾ ಹಾಗೂ ಬ್ರಿಟನ್ ದೇಶಗಳ ಮಧ್ಯೆ ನಡೆದಿದ್ದ ಕ್ರಿಮಿಯನ್ ಯುದ್ಧದಲ್ಲಿ ಅವರು ಸಲ್ಲಿಸಿರುವ ಶುಶ್ರೂಷಾ ಸೇವೆಯನ್ನು ಮಾನವ ಕುಲ ಮರೆಯಲಾಗದು ಎಂದರು.

ಫಿನಿಕ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ, ಡಾ.ಎಂ.ಎಂ. ತಿರ್ಲಾಪೂರ, ನರಹರಿ ಕಟ್ಟಿ, ನರ್ಸಿಂಗ್ ಕಾಲೇಜ್ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net