ಸಕಾಲದಲ್ಲಿ ಬಿತ್ತನೆ ಬೀಜ ಪೂರೈಕೆಯಾಗಲಿ

ನಂಜನಗೂಡು ತಾಲೂಕಿನ ಗೀಕಳ್ಳಿ ಗ್ರಾಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂತನ ಗ್ರಾಮ ಘಟಕವನ್ನು ರಚಿಸಲಾಯಿತು. ಜಿಲ್ಲಾಧ್ಯಕ್ಷ ಹಾಡ್ಯ ರವಿ, ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಅತ್ತಹಳ್ಳಿ ಸ್ವಾಮಿರಾಜ್, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ವಳಗೆರೆ ಗಣೇಶ್, ಮಹೇಶ್, ಮಲೆಯೂರು ಪ್ರವೀಣ್, ಅರಳಿ ಕಟ್ಟೆ ಕುಮಾರ್, ಉಡಿಗಾಲ ಮಂಜುನಾಥ್ ಇತರರಿದ್ದರು.

Published on

ನಂಜನಗೂಡು: ತಾಲೂಕಿನ ಗೀಕಳ್ಳಿ ಗ್ರಾಮದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂತನ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ ಗ್ರಾಮ ಘಟಕದ ನಾಮಫಲಕವನ್ನು ಉದ್ಘಾಟಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸಬೇಕು. ರಾಜ್ಯದ ಹಾಲು ಉತ್ಪಾದಕರ ಹಾಲಿನ ಪ್ರೋತ್ಸಾಹ ಧನ 950 ಕೋಟಿ ರೂ. ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಅಕ್ರಮ ಸಕ್ರಮ ವಿದ್ಯುತ್ ಮರು ಜಾರಿ ಮಾಡಬೇಕು. ಏ.1ರಿಂದ ಹಾಲಿನ ದರ 4 ರೂ. ಏರಿಕೆಯಾಗಿದ್ದು, ನೇರವಾಗಿ ಈ ಹಣ ರೈತರಿಗೆ ತಲುಪಬೇಕು. ಪ್ರಸ್ತುತ ಮುಂಗಾರು ಪ್ರಾರಂಭಗೊಂಡಿದ್ದು ಸಕಾಲದಲ್ಲಿ ಬಿತ್ತನೆ ಬೀಜಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು. ಅಲ್ಲದೆ ಗ್ರಾಮಗಳಲ್ಲಿ ಪಶು ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರ ಕಬ್ಬು ಬೆಳೆಗಾರರು ಹಾಗೂ ರೈತರ ಬಗ್ಗೆ ಚಿಂತನೆ ಮಾಡಿ ಕ್ರಮ ವಹಿಸದಿದ್ದಲ್ಲಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಅತ್ತಹಳ್ಳಿ ಸ್ವಾಮಿರಾಜ್, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಮುದ್ದಹಳ್ಳಿ ಚಿಕ್ಕ ಸ್ವಾಮಿ, ಗಣೇಶ್, ಮಹೇಶ್, ಮಲೆಯೂರು ಪ್ರವೀಣ್, ಅರಳಿಕಟ್ಟೆ ಕುಮಾರ್, ಉಡಿಗಾಲ ಮಂಜುನಾಥ್, ನಾಗೇಶ್, ಸಿದ್ದರಾಜು, ರವಿ, ಶಿವಮೂರ್ತಿ, ಕುಮಾರ್, ಆನಂದ್, ಗುರುಸ್ವಾಮಿ, ಜಗದೀಶ್, ಮಾದೇಗೌಡ, ಮಲ್ಲಣ್ಣ, ಜಯಮಾಲಾ, ಮಹದೇವ್, ಮಲೆಯಪ್ಪ, ಶಿವಕುಮಾರ್, ಸಿದ್ದುರೇಗೌಡ, ಗಣೇಶ್, ಶಿವಮೂರ್ತಿ, ವಿಶ್ವ, ಮಾದಪ್ಪ, ಸಿದ್ದರಾಜು, ಮಹದೇವ್,ಮಂಜೇಶ್, ಶಿವಮಲ್ಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net