ರೋಟರಿ ಸಂಸ್ಥೆ ಮತ್ತಷ್ಟು ಸೇವೆ ಮಾಡುವಂತಾಗಲಿ

ಅರೇಹಳ್ಳಿ ರೋಟರಿ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಯೋಧ ಭರತ್ ದಂಪತಿಯನ್ನು ಸನ್ಮಾನಿಸಲಾಯಿತು.
ಅರೇಹಳ್ಳಿ ರೋಟರಿ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಯೋಧ ಭರತ್ ದಂಪತಿಯನ್ನು ಸನ್ಮಾನಿಸಲಾಯಿತು.
Published on

ಬೇಲೂರು: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ಮಾಡುವಂತಾಗಲಿ ಎಂದು 3182ರ ಜಿಲ್ಲಾ ಪ್ರಾಂತಪಾಪಾಲ ಕೆ.ಪಾಲಾಕ್ಷ ಹೇಳಿದರು.

ತಾಲೂಕಿನ ಅರೇಹಳ್ಳಿ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ 2025-26ನೇ ಸಾಲಿನ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ರೋಟರಿ ಸದಸ್ಯರ ಸೇರ್ಪಡೆ ಹಾಗೂ ಸಾಮಾಜಿಕ ಕಾರ್ಯ ಮತ್ತು ಸಂಸ್ಥೆಯ ಆದೇಶವನ್ನು ಪಾಲಿಸಬೇಕಾದುದು ಪ್ರಮುಖ ಕರ್ತವ್ಯ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನ.ಎಂ.ಎಸ್ ಮಾತನಾಡಿ, ಪರಿಸರ, ಆರೋಗ್ಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ರೂಪಿಸಲಾದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

ಆಲೂರು ತಾಲೂಕಿನ ಮಡಬಲು ಗ್ರಾಮದ ಯೋಧ ಭರತ್ ಮಾತನಾಡಿ, ದೇಶ ಸೇವೆ ನಮ್ಮ ಧ್ಯೇಯವಾಗಬೇಕು. ಮಕ್ಕಳನ್ನು ಸೇನೆಗೆ ಸೇರಿಸಲು ಪಾಲಕರು ಹಿಂಜರಿಯಬಾರದು. ಸೇನೆಯಲ್ಲಿ ಬಳಸುವ ಅತ್ಯಾಧುನಿಕ ತಂತ್ರಜ್ಞಾನದಿಂದ ಯೋಧರಿಗೆ ರಕ್ಷಣೆ ನೀಡಲಾಗುತ್ತಿದೆ. ಆದ್ದರಿಂದ ಸೇನೆಗೆ ಸೇರುವ ಅವಕಾಶವನ್ನು ಯಾರೂ ಕೈಚೆಲ್ಲ ಬಾರದು ಎಂದರು.

ಸಹಾಯಕ ಪ್ರಾಂತಪಾಲ ಮಹೇಶ್.ಸಿ.ಎಸ್, ಕಾರ್ಯದರ್ಶಿ ಪ್ರವೀಣ್.ಎಂ.ವೈ, ರವಿಕುಮಾರ್.ಜೆ.ಎಸ್, ಖಜಾಂಚಿ ರಘುನಂದನ್.ಆರ್, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net