

ಬೇಲೂರು: ವಿಜಯದಶಮಿ ಅಂಗವಾಗಿ ಕಂದಾಯ ಇಲಾಖೆ ಕಸಬಾ ವಲಯದಿಂದ ಹಳೇ ತಾಲೂಕು ಕಚೇರಿಯಲ್ಲಿ ಗುರುವಾರ ಸಾಂಕೇತಿಕವಾಗಿ ಆಯೋಜಿಸಿದ್ದ ಗ್ರಾಮ ಜಮಾಬಂದಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಚಾಲನೆ ನೀಡಿದರು.
ವಿಜಯದಶಮಿ ಹಬ್ಬ ಸತ್ಯ, ಧರ್ಮ ನ್ಯಾಯದ ಜಯವನ್ನು ಪ್ರತಿಬಿಂಬಿಸುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ನಾವು ಕೂಡ ಸಾರ್ವಜನಿಕರಿಗೆ ನ್ಯಾಯಯುತ, ಪಾರದರ್ಶಕ ಹಾಗೂ ಸಮರ್ಥವಾದ ಸೇವೆ ನೀಡಲು ಬದ್ಧರಾಗಿರಬೇಕು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಸಾರ್ವಜನಿಕರ ವಿಶ್ವಾಸ ಹೆಚ್ಚಾಗುತ್ತದೆ. ಜನರಿಗೆ ದೋಷವಿಲ್ಲದೆ ಸುಲಭವಾಗಿ ಸೇವೆ ದೊರಕುವಂತೆ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಧ್ಯೇಯವಾಗಬೇಕು. ನಾವು ನಮ್ಮ ಕರ್ತವ್ಯಕ್ಕೆ ಸದಾ ನಿಷ್ಠೆಯಿಂದ ಕೆಲಸ ಮಾಡಿದರೆ, ಹಬ್ಬದ ಸಾರ್ಥಕತೆ ಹೆಚ್ಚಾಗುತ್ತದೆ. ಪ್ರತಿ ಹಬ್ಬ ನಮ್ಮ ಸೇವಾ ಮನೋಭಾವವನ್ನು ಸುಧಾರಿಸಲು ಪ್ರೇರಣೆ ನೀಡಬೇಕು ಎಂದು ಶ್ರೀಧರ್ ಕಂಕನವಾಡಿ ಹೇಳಿದರು.
ಕಂದಾಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿದುದರ ಬಗ್ಗೆ ತಿಳಿಸಲಾಯಿತು.
ರಾಜಸ್ವ ನಿರೀಕ್ಷಕ ನಟರಾಜ್, ಗ್ರಾಮಾಡಳಿತಾಧಿಕಾರಿಗಳಾದ ಹನುಮಂತು, ಮನೋಹರ್, ರಾಜಶೇಖರ್, ಶ್ರೀದೇವಿ ಸೇರಿದಂತೆ ಗ್ರಾಮ ಸಹಾಯಕರಿದ್ದರು.