ವೃತ್ತಿ ಪಾವಿತ್ರೃ ಕಾಪಾಡಿಕೊಳ್ಳಲಿ

web5
ಚಿಕ್ಕೋಡಿ ವಕೀಲರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ವಕೀಲರ ದಿನವನ್ನು ನ್ಯಾಯಾಧೀಶೆ ಕಾವೇರಿ ಉದ್ಘಾಟಿಸಿದರು. ನ್ಯಾಯಾಧೀಶರಾದ ಹರೀಶ ಪಾಟೀಲ, ತೃಪ್ತಿ ಧರಣಿ, ವೈ.ಜಿ.ತುಂಗಳ, ಕಲ್ಮೇಶ ಕಿವಡ ಇತರರಿದ್ದ್ದರು.
Published on

ಚಿಕ್ಕೋಡಿ: ನಿರಂತರ ಅಧ್ಯಯನದಿಂದ ಉತ್ತಮ ವಕೀಲರಾಗಲು ಸಾಧ್ಯ. ವಕೀಲರು ವೃತ್ತಿ ಗೌರವ ಕಾಪಾಡಿಕೊಂಡು ಮುನ್ನಡೆಯಬೇಕು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶೆ ಕಾವೇರಿ ಹೇಳಿದರು.

ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಕೀಲರ ದಿನ ಹಾಗೂ ನೂತನವಾಗಿ ಸೇರ್ಪಡೆಯಾದ ಯುವ ವಕೀಲರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿ, ಯುವ ವಕೀಲರು ಹಿರಿಯ ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆಲಸ ನಿರ್ವಹಿಸಿದಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ವಾದ ಮಂಡಿಸಿದ ಚಿಕ್ಕೋಡಿ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿ, ನವದೆಹಲಿ ಸುಪ್ರೀಂಕೋರ್ಟ್ ರಜಿಸ್ಟರ್ ಆಗಿ ಪದೋನ್ನತಿ ಹೊಂದುತ್ತಿರುವುದು ನನ್ನ ಭಾಗ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಮಾತನಾಡಿ, ಜನರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶವನ್ನು ವಕೀಲ ವೃತ್ತಿ ಹೊಂದಿದೆ ಎಂದು ತಿಳಿಸಿದರು. ವಕೀಲ ಎಂ.ಆರ್.ಸಗರೆ ಮಾತನಾಡಿದರು. ಪ್ರಧಾನ ಹಿರಿಯ ಸಿವಿಲ್ ದಿವಾನಿ ನ್ಯಾಯಾಧೀಶ ಹರೀಶ ರಂಗನಗೌಡ ಪಾಟೀಲ, 1ನೇ ಹೆಚ್ಚುವರಿ ದಿವಾನಿ ನ್ಯಾಯಾದೀಶ ತೃಪ್ತಿ ಧರಣೆ, ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ, ರಾಜಶೇಖರ ಮಿರ್ಜಿ, ಬಿ.ಆರ್.ಯಾದವ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ವಾಲಿ, ಜಂಟಿ ಕಾರ್ಯದರ್ಶಿ ಎಂ.ಜಿ.ಮೋಟನ್ನವರ, ಉಪಾಧ್ಯಕ್ಷ ಸುಭಾಷ ಯರನಾಳೆ, ಸಿ.ಬಿ.ಪಾಟೀಲ, ಬಿ.ಎನ್.ಪಾಟೀಲ, ಜಿ.ಮಾದಪ್ಪಗೋಳ, ಎನ್.ಡಿ.ದಾರಬಾರೆ, ಎಂ.ಬಿ. ಬಾನಿ, ಚೇತನ ಪಚಂಡಿ, ಎಸ್.ಎಂ. ದಿನ್ನಿಮನಿ, ಎ.ಎ. ಚೌಗಲಾ, ಎಚ್.ಎಸ್. ನಸಲಾಪೂರೆ ಇತರರಿದ್ದರು. ಸುಪ್ರೀಯಾ ಪಾಟೀಲ ನಿರೂಪಿಸಿದರು. ದೀಪಾ ದೇವಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net