ಮುಂದಿನ ಪೀಳಿಗೆಗೆ ತತ್ವಾದರ್ಶ ತಿಳಿಸುವಂತಾಗಲಿ

MDG RENUKACHARYA JAYANTI
Published on

ಮುಂಡರಗಿ: ಶ್ರೀ ಜಗದ್ಗುರು ರೇಣುಕಾಚಾರ್ಯರು ಮನುಕುಲದ ಮಹಾಪುರುಷರು. ಅವರು ಇಡೀ ಮನುಕುಲಕ್ಕೆ ಶಾಂತಿ ಸಂದೇಶ ನೀಡಿದ್ದಾರೆ. ಅವರು ವೀರಶೈವ ಧರ್ಮದ ಮೂಲ ಪುರುಷರಾಗಿದ್ದು, ಸಕಲ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಮುಂದಿನ ಪೀಳಿಗೆಗೆ ಅವರ ತತ್ವಾದರ್ಶ ಹಾಗೂ ಚಿಂತನೆಗಳನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೀರಮಹೇಶ್ವರ ಜಂಗಮ ಸಮಾಜದ ತಾಲೂಕಾಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿ, ಶ್ರೀ ರೇಣುಕಾಚಾರ್ಯರು 800ನೇ ಶತಮಾನದಲ್ಲಿ ವೀರಶೈವ ಸಿದ್ಧಾಂತ ಶಿಖಾಮಣಿ ಗ್ರಂಥದಿಂದ ವಿಶ್ವ ಬಂಧುತ್ವ ಸಂದೇಶ ಸಾರಿದವರು. ಎಲ್ಲ ವರ್ಗದ ಸಮಾಜಕ್ಕೆ ಧರ್ಮ, ಆಚಾರ, ವಿಚಾರ, ಪೂಜೆ, ನಾವೆಲ್ಲರೂ ಒಂದೇ ಅನ್ನುವ ಭಾವದಲ್ಲಿ ಮತ್ತು ಲಿಂಗ, ಜಾತಿ, ಬೇಧ ತಾರತಮ್ಯ ಹೋಗಲಾಡಿಸಿ, ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ತತ್ವ ಸಿದ್ಧಾಂತವನ್ನು ಬೋಧಿಸಿ ಇಡೀ ಮನುಕುಲ ಹಾಗೂ ಲೋಕಕಲ್ಯಾಣಕ್ಕಾಗಿ ಶ್ರಮಿಸಿದರು. ಜಾತಿ, ಮತ, ಪಂಥ, ಮೀರಿ ಸರ್ವ ಜನಾಂಗದವರ ಅಭ್ಯುದಯಕ್ಕಾಗಿ ಕೊಟ್ಟ ಸಂದೇಶ ಎಂದಿಗೂ ಮರೆಯಲಾಗದು ಎಂದು ತಿಳಿಸಿದರು.

ವೇ.ಮೂ. ಷಡಕ್ಷರಯ್ಯ ಅಳವಂಡಿಮಠ, ಹಾಲಯ್ಯ ಹಿರೇಮಠ, ವಿ.ಜೆ. ಹಿರೇಮಠ, ವೀರೇಶ ಮುತ್ತಿನಪೆಂಡಿಮಠ, ಬಸಯ್ಯ ಹಿರೇಮಠ, ವಿನಯ ಗಂಧದ, ಜಯದೇವ ಹಿರೇಮಠ, ಜಗದೀಶ ಪತ್ರಿಮಠ, ಅಜಯ್ ಚುರ್ಚಿಹಾಳಮಠ, ಮಲ್ಲಯ್ಯ ಹಿರೇಮಠ, ನೇತ್ರಾವತಿ ಚಿಂಚಲಿಮಠ, ಶಿವು ಹಿರೇಮಠ, ವೀರಯ್ಯ ಶಿರಹಟ್ಟಿಮಠ, ಗುರು ಶಿರಹಟ್ಟಿಮಠ, ಮಂಜು ಜಾಟಗೇರಿಮಠ, ಕೊಟ್ರಯ್ಯ ಹಿರೇಮಠ, ಮುತ್ತಣ್ಣ ಅಳವಂಡಿಮಠ, ಮಹೇಶ್ವರಯ್ಯ ಹೊಸಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net