ಮದ್ದೂರು ಜನರು ಜಿಲ್ಲೆಯ ವೈಭವ ಹೆಚ್ಚಿಸಲಿ

oppo_2
ಮದ್ದೂರಿನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾಲೋಚನಾ ಸಭೆಯನ್ನು ಡಾ.ಮಹೇಶ ಜೋಶಿ ಉದ್ಘಾಟಿಸಿದರು. ಮೀರಾ ಶಿವಲಿಂಗಯ್ಯ, ಸುನೀಲ್ ಕುಮಾರ್, ಹರ್ಷ ಪಣ್ಣೆದೊಡ್ಡಿ, ಡಾ.ಕೃಷ್ಣೇಗೌಡ, ಅಪ್ಪಾಜಪ್ಪ, ಡಿ.ಪಿ.ಸ್ವಾಮಿ, ವಿ.ಸಿ.ಉಮಾಶಂಕರ್, ಕ್ರಾಂತಿಸಿಂಹ ಇದ್ದರು.
Published on

ಮದ್ದೂರು: ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯ ವೈಭವವನ್ನು ಹೆಚ್ಚಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಹಾಗೂ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಮದ್ದೂರು ತಾಲೂಕಿನ ಜನರು ಹಾಗೂ ಕನ್ನಡಿಗರು ಮನೆಹಬ್ಬದಂತೆ ಆಚರಿಸಲು ಸಹಕರಿಸುವುದರ ಜತೆಗೆ ಸಮ್ಮೇಳನಕ್ಕೆ ಆಗಮಿಸಬೇಕು ಮನವಿ ಮಾಡಿದರು.


ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಕೋಣಸಾಲೆ ಸುನೀಲ್ ಕುಮಾರ್, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ, ಕೋಶಾಧ್ಯಕ್ಷರಾದ ಬಿ.ಎಂ.ಅಪ್ಪಾಜಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ, ತಾಲೂಕು ಮಾಜಿ ಅಧ್ಯಕ್ಷ ಕ್ಷೌಕತ್ ಆಲಿ, ಸಿ.ಎಂ.ಮಹದೇವಯ್ಯ, ರಾಮಚಂದ್ರ, ಸಿ.ಅಪೂರ್ವಚಂದ್ರು, ವಿ.ಸಿ.ಉಮಾಶಂಕರ್, ತಹಸೀಲ್ದಾರ್ ಡಾ.ಸ್ಮಿತಾರಾಮು, ಸಿ.ಎಚ್. ಕಾಳಿರಯ್ಯ, ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಡಾ.ರವೀಂದ್ರ ಬಿ ಗೌಡ, ನಾರಾಯಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net