ಪಂಚವರ್ಣದ ಸಮಾಜಮುಖಿ ಕಾರ್ಯ ಮಾದರಿಯಾಗಲಿ

kota (2)
Published on

ಕೋಟ: ಪಂಚವರ್ಣ ಸಂಟನೆ ನಡೆಸುವ ಪ್ರತಿ ಸವಾಜಮುಖಿ ಕಾರ್ಯವು ಗ್ರಾಮದ ಪ್ರತಿಯೊಂದು ಸಂಟನೆಗೂ ವಾದರಿಯಾಗಬೇಕು. ಆ ಮೂಲಕ ಗ್ರಾಮ ಸುಭಿಕ್ಷೆಯಾಗಲಿದೆ ಎಂದು ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಹೇಳಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ನ.16ರಂದು ಕೋಟದ ಗಾಂಧಿಮೈದಾನದಲ್ಲಿ ಕೋಟ ಪಂಚವರ್ಣ ಯುವಕ, ಮಹಿಳಾ ಮಂಡಲ ನೇತೃತ್ವದಲ್ಲಿ ನಡೆಯುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸದ್ಭಾವನಾ-2025ರ ಪೋಸ್ಟರ್ ಬಿಡುಗಡೆಗೊಳಿಸಿ ವಾತನಾಡಿದರು. ಪಂಚವರ್ಣ ಗೌರವ ಸಲಹೆಗಾರ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಕೋಟ ಸಹಕಾರಿ ವ್ಯವಸಾಯಕ ಸಂ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್, ಜನತಾ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರಶಾಂತ್ ಎ.ಕುಂದರ್, ಪ್ರಮುಖರಾದ ಗೀತಾ ಎ.ಕುಂದರ್, ಸತೀಶ್ ಎಚ್.ಕುಂದರ್, ಶೇವಧಿ ಸುರೇಶ್ ಗಾಣಿಗ, ಭಾಸ್ಕರ್ ಶೆಟ್ಟಿ, ಶಶಿಧರ ತಿಂಗಳಾಯ, ಗಿರೀಶ್ ಆಚಾರ್, ಸಂತೋಷ್ ಪೂಜಾರಿ, ದಿನೇಶ್ ಆಚಾರ್, ಲಲಿತಾ ಪೂಜಾರಿ, ಪುಷ್ಪಾ ಕೆ. ಇದ್ದರು.

ಕಲಾವತಿ ಅಶೋಕ್ ಸ್ವಾಗತಿಸಿದರು. ವಸಂತಿ ಹಂದಟ್ಟು ವಂದಿಸಿದರು. ಸುಜಾತಾ ಎಂ.ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net