

ಅಥಣಿ: ಭಾರತ ವಿಶ್ವದಲ್ಲಿ ಅಪಾರ ವೈವಿಧ್ಯ ರೀತಿಯ ಆಧ್ಯಾತ್ಮಿಕ ಸಿರಿ ಸಂಪತ್ತನ್ನು ಹೊಂದಿದೆ. ಕಾರಣ ಮುನಿಗಳು, ತಪಸ್ವಿಗಳು ಹಾಗೂ ಅಲ್ಲಮಪ್ರಭು ಮಣ್ಣಿಗಾಗಿ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ ಎಂದು ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಮೋಟಗಿಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಲ್ಲಮಪ್ರಭುದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣವರು ಸ್ಥಾಪಿಸಿದ ಅನುಭವ ಹಾಗೂ ಶೂನ್ಯ ಸಿಂಹಾಸನದ ಪ್ರಥಮ ಅಧ್ಯಕ್ಷರು ಅಲ್ಲಮಪ್ರಭು. ಮನದ ಮುಂದಣ ಆಶೆಯೇ ಮಾಯೆ ಅಂತಹ ಅನೇಕ ವಚನಗಳ ಮೂಲಕ ತಮ್ಮ ಜ್ಞಾನ ಭಂಡಾರವನ್ನು ನಾಡಿಗೆ ಸಮರ್ಪಿಸಿ, ಜಾತಿ, ಮತ, ಪಂಥ, ಅಂಧಕಾರ ತೊಡೆದು ಬೆಳಕು ಮೂಡಿಸಿದ ಅಲ್ಲಮಪ್ರಭುಗಳ ಜಯಂತಿ ಆಚರಿಸುವುದು ಮತ್ತು ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಮುನ್ನಡೆಯಬೇಕು ಎಂದರು.
ಅಲ್ಲಮಪ್ರಭುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಕ್ತಾಯಿ ಮಹಿಳಾ ಬಳಗದವರಿಂದ ವಚನ ಪ್ರಾರ್ಥನೆ ಜರುಗಿತು. ಅಜ್ಜಪ್ಪ ಕಾವೇರಿ, ಎಂ.ಡಿ.ತೊದಲಬಾಗಿ, ಎಸ್.ಆರ್.ಪಾಟೀಲ, ಶಿವಾನಂದ ಬುಲಿ, ಮುರುಗೇಶ ಬಾನಿ, ಶಂಕರ ಬುಕಿಟಗಾರ, ಈರಣ್ಣ ಅಡಗಲ್ಲ, ಗಜಾನನ ಗಸ್ತಿ, ಸುನಿತಾ ಮೆನಸಿ, ಸುನಂದಾ ಅಳಿಮಟ್ಟಿ, ಶಿವಲೀಲಾ ಪಟ್ಟಣಶೆಟ್ಟಿ, ಅಶ್ವಿನಿ ಕೋರೆ, ವೈಶಾಲಿ ಮಠಪತಿ ಇತರರಿದ್ದರು.