ಕೂಸಿನ ಮನೆ ಸದುಪಯೋಗವಾಗಲಿ

27ATHNAIGRAMIN3
Published on

ಅಥಣಿ ಗ್ರಾಮೀಣ: ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಪೋಷಣೆ ಮತ್ತು ಪಾಲನೆಗಾಗಿ ಸರ್ಕಾರ ಕೂಸಿನಮನೆ, ‘ಶಿಶು ಪಾಲನಾ ಕೇಂದ್ರ’ ಜಾರಿಗೆ ತಂದಿದ್ದು, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ ಹೇಳಿದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಸೋಮವಾರ ಕೂಸಿನ ಮನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಯಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ. ಮಕ್ಕಳ ಲಾಲನೆ ಪಾಲನೆಗೆ ತಾಯಿ ಸಾಕಷ್ಟು ಸಮಯ ನೀಡಬೇಕಾಗುತ್ತದೆ. ಆದರೆ, ಕೆಲಸ ಮಾಡುವ ಮಹಿಳೆ ಮಕ್ಕಳಿಗೆ ಸಮಯ ಕೊಡುವುದಾಗಲಿ, ನೋಡಿ ಕೊಳ್ಳುದಕ್ಕೆ ಆಗುವುದಿಲ್ಲ.

ಇದಕ್ಕಾಗಿ ಮಕ್ಕಳ ಪಾಲನೆಗಾಗಿ ಸರ್ಕಾರ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿ ಆರೋಗ್ಯವಂತರಾಗಿ ನೋಡಿಕೊಳ್ಳಲು ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಿ ಕೂಸಿನ ಮನೆ ಯೋಜನೆ ಜಾರಿಗೊಳಿಸಿದೆ. 6 ತಿಂಗಳಿಂದ 3 ವರ್ಷದ ಮಕ್ಕಳನ್ನು ಬಿಡಬಹುದು ಎಂದರು.

ಪಿಡಿಒ ಸುಭಾಷ ಹುಬ್ಬಳ್ಳಿ, ಸಂಪನ್ಮೂಲವ್ಯಕ್ತಿ ಸಂಜು ತಳವಾರ, ಚಂದ್ರಕಾಂತ ಹಾಲಳ್ಳಿ, ಮಹಾದೇವಿ ಮಠಪತಿ, ಪ್ರಕಾಶ ಸಕಲಕನವರ, ಮಹಾಂತೇಶ ಗುಮಟಿ, ರೇಖಾ ಮಾದರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net