ನರೇಗಾ ಯೋಜನೆ ಸದ್ಬಳಕೆ ಆಗಲಿ

May the Narega scheme be put to good use
ಬೀಳಗಿ ತಾಲೂಕಿನ ಸುನಗ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಶಾಸಕ ಜೆ.ಟಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಪವಿತ್ರಾ ದಳವಾಯಿ, ತಾಪಂ ಇಒ ಸಿದ್ದು ನಕ್ಕರಗುಂದಿ ಇತರರಿದ್ದರು.
Published on

ಬೀಳಗಿ: ಗ್ರಾಮ ಪಂಚಾಯಿತಿಗಳು ಗ್ರಾಮ ಹಾಗೂ ರೈತರ ಸರ್ವತೋಮುಖ ಅಭಿವೃದ್ಧಿಗೆ ಕಲ್ಪವೃಕ್ಷ ಇದಂತೆ. ನರೇಗಾ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಅವಕಾಶವಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಸುನಗ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಯೋಜನೆ ಹಾಗೂ 2023-24 ನೇ ಸಾಲಿನ ಕರ ವಸೂಲಿ (ವರ್ಗ1ರ) ಅನುದಾನದಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರಾ ಬಸಪ್ಪ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣಕುಮಾರ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮೇಟಿ, ಪಿಡಿಒ ಡಿ.ಆರ್.ಅಡವಿ, ಕಾರ್ಯದರ್ಶಿ ಬಿ.ಎಸ್.ದಳವಾಯಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಅಭಯಕುಮಾರ ಮೊರಬ, ನಾಗರಾಳ ಗ್ರಾಪಂ ಸದಸ್ಯರಾದ ರವಿ ಲಿಂಗನ್ನವರ, ಲಕ್ಷ್ಮೀಬಾಯಿ ಭಜಂತ್ರಿ, ಆನಂದ ಲಮಾಣಿ, ಚಂದ್ರಶೇಖರ ನಡುವಿನಮನಿ ಹಾಗೂ ಪ್ರಕಾಶ ಬಗಲಿ ಇದ್ದರು.

ಬಿಸಿಯೂಟ ಕೋಣೆ ಉದ್ಘಾಟಿಸಲಿಲ್ಲ

ಗ್ರಾಪಂ ಕಟ್ಟಡ ನಿರ್ಮಾಣದ ಭೂಮಿಪೂಜೆ ನಂತರ ಸುನಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೋಣೆ ಉದ್ಘಾಟನೆಗೆ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರು ಶಾಸಕರನ್ನು ಆಹ್ವಾನ ನೀಡಿದರು. ನೂತನ ಕಟ್ಟಡ ಉದ್ಘಾಟನೆಗೆ ಬಂದ ಶಾಸಕರು ಇಲ್ಲಿ ಉದ್ಘಾಟನೆ ಕಾರ್ಯಕ್ರಮದ ಶಿಲೆ ಹಾಗೂ ನಾಮಲಕವಿಲ್ಲ. ಆದ್ದರಿಂದ ನಾನು ಉದ್ಘಾಟಿಸಲ್ಲ ಎಂದು ಹೇಳಿದರು. ಆದ್ದರಿಂದ ಅದರ ಬದಲಾಗಿದೆ ಶಾಲೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಆಡಳಿತ ಮಂಡಳಿ ಮನವಿ ಮೇರೆಗೆ ಶಾಲೆ ಆವರಣದಲ್ಲಿ ಸಸಿ ನೆಟ್ಟರು. ನರೇಗಾ ಯೋಜನೆಯಡಿ ಎಸ್ಸಿ-ಎಸ್ಟಿ ರೈತರಿಗೆ ತೋಟಗಾರಿಕೆ ಇಲಾಖೆ ಮೂಲಕ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಿದರು.

ಮುಖ್ಯ ಶಿಕ್ಷಕರಿಗೆ ತರಾಟೆ

ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. ನಮ್ಮ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ ಎಂದು ಶಾಸಕರ ಗಮನಕ್ಕೆ ತಂದಾಗ, ನೀವು ಏಕೆ ಅವರಿಗೆ ರೀಲಿಜ್ ಮಾಡಿದ್ರಿ. ಅವರ ಪರವಾಗಿ ಬೇರೆ ದೈಹಿಕ ಶಿಕ್ಷಕರ ಬರುವರೆಗೆ ತಡೆಮಾಡಬೇಕಾಗಿತ್ತು ಎಂದು ಮುಖ್ಯಶಿಕ್ಷಕ ಅಶೋಕ ನ್ಯಾಮಗೌಡ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ನಂತರ ಬಿಇಒ ಅವರಿಗೆ ಇನ್ನೂ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ನಂತರ ಶಾಲೆಯಿಂದ ದೈತಪ್ಪನ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net