

ರಾಮದುರ್ಗ: ಭಾರತದಲ್ಲಿ ಜನ್ಮ ಪಡೆದ ನಾವೇ
ಪುಣ್ಯವಂತರು. ನೆಲ, ಜಲ ರಣೆಗೆ ಹಗಲಿರುಳು ಶ್ರಮಿಸಿ,
ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸದಾ ಸ್ಮರಿಸಬೇಕು
ಎಂದು ನಾಡೋಜ ಡಾ. ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್
.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ
ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 59ನೇ
ವಾರ್ಷಿಕ ದಿನ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾ ಪ್ರಸಾರಕ ಸಮಿತಿ
ಅಧ್ಯ ಎಸ್.ಎಸ್. ಸುಲ್ತಾನಪುರ
ಮಾತನಾಡಿ, ವಿದ್ಯಾರ್ಥಿಗಳು
ಔದ್ಯೋಗಿಕವಾಗಿಯೂ ಪ್ರಗತಿ
ಸಾಧಿಸುವ ಮೂಲಕ ಪಾಲಕರ ಋಣ ತೀರಿಸಬೇಕೆಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 3ನೇ ರ್ಯಾಂಕ್
ಪಡೆದ ಸವಿತಾ ಬಂಡಿವಡ್ಡರ, ಮಹಾವಿದ್ಯಾಲಯಕ್ಕೆ
ಪ್ರಥಮ ಸ್ಥಾನ ಪಡೆದ ಶಿವು ಮೋಟೆ (ಬಿಎ), ಪೂಜಾ
ಬೂದಿ (ಬಿಎಸ್ಸಿ), ಸಹನಾ ದುರಗನ್ನವರ (ಬಿಕಾಂ)
2024&25ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ
ಬ್ಲೂಗಳಾದ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಹಾಗೂ ನಿವೃತ್ತಿ ಹೊಂದಿದ ಎಸ್.ಬಿ.ಕಟ್ನೂರ ಅವರನ್ನು
ಸನ್ಮಾನಿಸಲಾಯಿತು. ಕಿರಣಕುಮಾರ ಪವಾಡಿನಾಯ್ಕರ
ಮತ್ತು ಕಾವ್ಯಾ ರಬಗಲ್ಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು.
ವಿದ್ಯಾ ಪ್ರಸಾರಕ ಸಮಿತಿಯ ಗೌರವ ಕಾರ್ಯದರ್ಶಿ
ಆರ್.ಪಿ.ಜಗತಾಪ, ಆಡಳಿತ ಮಂಡಳಿ ಕಾರ್ಯಾಧ್ಯ
ಎಸ್.ಬಿ.ಕಲಹಾಳ, ಡಾ.ವೈ.ಬಿ.ಕುಲಗೋಡ,
ಟಿ.ದಾಮೋದರ, ಪಿ.ಎಂ.ಜಗತಾಪ, ಆರ್.ಜಿ.ವಜ್ರಮಟ್ಟಿ
ಇತರರಿದ್ದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ
ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಮಖಾನಾ ಉಪಾಧ್ಯ
ಎಸ್.ಐ.ಮಳಗಲಿ ವಾರ್ಷಿಕ ವರದಿ ವಾಚಿಸಿದರು.
ಎಸ್.ಕೆ.ರಂಗಪ್ಪಗೋಳ, ಡಾ.ವಿ.ಎಂ.ಜಬಡೆ
ನಿರೂಪಿಸಿದರು. ಸಂಜನಾ ಹಿಂದಿನಮನಿ ವಂದಿಸಿದರು.