ಮಹಾತ್ಮರ ಆದರ್ಶ ಅಳವಡಿಸಿಕೊಳ್ಳಲಿ

27RAM2
Published on

ರಾಮದುರ್ಗ: ಮಹಾತ್ಮರು ಹಾಗೂ ಯೋಗಿಗಳ ತತ್ತ$$$್ವ ಆದರ್ಶ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ದುಕಿನಲ್ಲಿ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದಿಪ ಗುರೂಜಿ ಹೇಳಿದರು.

ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಹೇಮ ವೇಮ ಸೇವಾ ಸಮಿತಿ ಆಶ್ರಯದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಗುರುವಾರ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನ 174ನೇ ಮಾಸಿಕ ತತ್ತ್ವ ಚಿಂತನ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಜೀವನದಲ್ಲಿ ಪರೋಪಕಾರ ಹಾಗೂ ದಾನ&ಧರ್ಮ ಮಾಡುವ ಮೂಲಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ವೆಂಕಟೇಶ ಹುಣಸೀಕಟ್ಟಿ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವದಿಂದ ಗುರು ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಿಮ್ಮಾಪುರ ಶಿವಾನಂದ ಮಠದ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡ ವೇಮನರ ವಚನ ಗಾಯನ ಪ್ರಸ್ತುತಪಡಿಸಿದರು.

ಹೇಮ ವೇಮ ಸೇವಾ ಸಮಿತಿ ಅಧ್ಯ ಪ್ರವಿಣ ನಂದೆಪ್ಪನವರ, ರಮೇಶ ಅಣ್ಣಿಗೇರಿ, ಜಿ.ಬಿ.ರಂಗನಗೌಡರ, ಬಸನಗೌಡ ದ್ಯಾವನಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net