ಸಕಾಲಕ್ಕೆ ಸಾಲ ಮರುಪಾವತಿಯಾಗಲಿ

24Nagar1
Published on

ನಾಗರಮುನ್ನೋಳಿ: ಸಹಕಾರ ಸಂಘದ ಬೆಳೆವಣಿಗೆಗೆ ಸದಸ್ಯರು, ಗ್ರಾಹಕರು ಹಾಗೂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಾತ್ರ ಮುಖ್ಯ ಎಂದು ಅಧ್ಯಕ್ಷ ರಾಜು ಕುಂಬಾರ ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ರೈತರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಸಹಕಾರ ಸಂಘ ಬೆಳೆಯಲು ಸಾಧ್ಯ. ದೀಪಾವಳಿ ಅಂಗವಾಗಿ ರೈತರಿಗೆ ಶೇ.10 ಬೋನಸ್ ನೀಡಲಾಗುವುದು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ ಮಾತನಾಡಿದರು. ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಚೌಗಲಾ ವಾರ್ಷಿಕ ವರದಿ ಮಂಡಿಸಿದರು. ಸಂಘ 3184 ಸದಸ್ಯರನ್ನು ಹೊಂದಿದೆ. 1 ಕೋಟಿ ರೂ. ಷೇರು ಬಂಡವಾಳ, 1.62 ಕೋಟಿ ರೂ. ಠೇವಣಿ ಹೊಂದಿದೆ. 1.86 ಕೋಟಿ ರೂ. ಜಾಮೀನು ಸಾಲ ನೀಡಲಾಗಿದೆ. ಶೇ.97ರಷ್ಟು ವಸೂಲಿ ಮಾಡಲಾಗಿದೆ. 33.86 ಲಕ್ಷ ರೂ. ಲಾಭಾಂಶ ಹೊಂದಿದೆ ಎಂದರು.

ಉಪಾಧ್ಯಕ್ಷೆ ಪ್ರಿಯಾಂಕಾ ಈಟಿ, ಲಕ್ಷ್ಮೀಸಾಗರ ಈಟಿ, ಲಾಡಜಿ ಮುಲ್ತಾನಿ, ಬಿ.ಎಸ್.ಯಾದಗೂಡೆ, ಮಹಾದೇವ ಚೌಗಲಾ, ಶಿವಕ್ಕ ಘಾವಡೆ, ವಿನಾಯಕ ಕುಂಬಾರ, ಎಂ.ಬಿ.ಆಲೂರೆ, ಶಂಕರ ನೇರ್ಲಿ, ಪಿ.ಎಸ್.ಮನಗೂಳಿ, ಮಾರುತಿ ಮರ‌್ಯಾಯಿ, ವಿಶ್ವನಾಥ ನೇರ್ಲಿ, ಎಂ.ಎಸ್.ಈಟಿ, ಡಿ.ಆರ್.ಕೋಟ್ಯಪಗೋಳ, ಬಸವಣ್ಣಿ ಮಾಂಗ್, ಅಣ್ಣಪ್ಪ ಮನಗೂಳಿ, ಮಾರುತಿ ಹುಲ್ಲೋಳಿ, ಗೋಪಾಲ ಕುಂಬಾರ,

ಸಂಜು ಕುಂಬಾರ, ಬಸಗೌಡ ಬಸಗೌಡನ್ನವರ, ಬಸವಣ್ಣಿ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net