ದಾದಿಯರ ಬದುಕು ಹಸನಾಗಿರಲಿ

SGN DADIYARA DINA
Published on

ಶಿಗ್ಗಾಂವಿ: ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರು ನೀಡುವ ಚಿಕಿತ್ಸೆಗಳು ಮಹತ್ವದ್ದಾಗಿದ್ದು. ವೈದ್ಯರು ನಿರ್ದೇಶಿಸಿದ ಚಿಕಿತ್ಸಾ ಸೂತ್ರಗಳನ್ನು ಅನುಷ್ಠಾನ ಮಾಡುವಲ್ಲಿ ದಾದಿಯರು ಪ್ರಭಾವಶಾಲಿಗಳಾಗಿದ್ದಾರೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ನಾಯಕ ಹೇಳಿದರು.

ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ನರ್ಸಿಂಗ್ ಪಿತಾಮಹೆ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ರೋಗಿಗಳು ಗುಣವಾಗಲೂ ಔಷಧ, ಚಿಕಿತ್ಸೆ ಎಷ್ಟು ಅಗತ್ಯವೊ, ಆರೈಕೆ ಮಾಡುವ ದಾದಿಯರ ಪ್ರೀತಿ ಮತ್ತು ವಿಶ್ವಾಸ ಕೂಡ ಅಷ್ಟೇ ಮುಖ್ಯ. ಹೀಗಾಗಿ ಇನ್ನೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿಸುತ್ತಿರುವ ದಾದಿಯರ ಬದುಕು ಹಸನಾಗಿರಬೇಕು ಎಂದರು. ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲು ಕ್ಯಾಂಡಲ್ ದೀಪ ಬೆಳಗಿಸಲಾಯಿತು.

ತಜ್ಞ ವೈದ್ಯರಾದ ಡಾ. ಗುರುರಾಜ, ಡಾ.ಸುಭಾಸ ಲೋಖ್ರೆ, ಡಾ. ವಿವೇಕ ಜೈನಕೇರಿ, ಡಾ. ಮಹೇಶ ಜಗದವರ, ಡಾ. ರಾಜೇಶ್ವರಿ ಚನ್ನಗೌಡ್ರ, ಡಾ.ತಬುಸುಮ್ ಡಾ.ಬಿ.ಆರ್. ಪಾಟೀಲ, ಡಾ.ವಿಧ್ಯಾವತಿ ಬ್ಯಾಟಪ್ಪನವರ, ಶುಶ್ರೂಷಾ ಅಧೀಕ್ಷಕಿ ಸುಶೀಲಾ ದೇವಸೂರ, ಶುಶ್ರೂಷಕರಾದ ಆರ್ ಸಾರಮ್ಮ, ಉಮಾ ಮುಳಗುಂದ, ವನಿತಾ ಕುರಂದವಾಡ, ಶಕುಂತಲಾ ಶಾನವಾಡ, ಶಶಿಕಲಾ ರಾಮಗೇರಿ, ರತ್ನಾ ಕಮ್ಮಾರ, ಯಶೋಧಾ, ಆನಂದ ಹುಂಬಿ, ಸುಧಾ ಸಾಲಿ, ಅಂಜು ಡಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net