ರೈತರು, ಕೂಲಿ ಕಾರ್ಮಿಕರ ಬದುಕು ಹಸನಾಗಲಿ

Deodurga Bakrid
ದೇವದುರ್ಗದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಧರ್ಮಗುರು ಮೌಲಾನ ಮೊಹಮ್ಮದ್ ಜುನೇದ್ ಹಫೀಜ್ ಧರ್ಮ ಸಂದೇಶ ನೀಡಿದರು. ಪ್ರಮುಖರಾದ ಮೌಲಾನ ಮೈಹಿಬೂಬ ಮುಖ್ತಿ, ಅಮೀನ್ ಬಾಷಾ ಗೌರಂಪೇಟೆ, ಸುಲೇಮಾನ್ ಸಾಬ್, ರಾಜ್ ಮೊಹಮ್ಮದ್ ತಾತ, ಆಫೀಜ್ ಮೊಹಮ್ಮದ್ ಇರ್ಫಾನ್, ಖಾಜಿ ಮೊಹಮ್ಮದ್ ಜಾಕೀರ್ ಹುಸೇನ್ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶನಿವಾರ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.

ಧರ್ಮಗುರು ಮೌಲಾನ ಮೊಹಮ್ಮದ್ ಜುನೇದ್ ಹಫೀಜ್, ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಪವಿತ್ರ ಕುರಾನ್ ಬೋಧಿಸಿದರು. ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ.

ಪ್ರತಿಯೊಬ್ಬರೂ ಶುದ್ಧ ಭಕ್ತಿಯಿಂದ ಪ್ರಾರ್ಥನೆ ಮಾಡಿ ಅಲ್ಲಾಹುವಿನ ಕೃಪೆಗೆ ಪಾತ್ರರಾಗಬೇಕು. ಈ ವರ್ಷ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಲಾಗಿದೆ. ದೇವರ ದಯೆಯಿಂದ ರೈತರು, ಕೂಲಿ ಕಾರ್ಮಿಕರ ಬದುಕು ಹಸನಾಗಲಿ. ಎಲ್ಲ ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಜೀವನ ನಡೆಸಬೇಕು ಎಂದರು.

ಪ್ರಮುಖರಾದ ಮೌಲಾನ ಮೈಹಿಬೂಬ ಮುಖ್ತಿ, ಅಮೀನ್ ಬಾಷಾ ಗೌರಂಪೇಟೆ, ಸುಲೇಮಾನ್ ಸಾಬ್, ರಾಜ್ ಮೊಹಮ್ಮದ್ ತಾತ, ಆಫೀಜ್ ಮೊಹಮ್ಮದ್ ಇರ್ಫಾನ್, ಖಾಜಿ ಮೊಹಮ್ಮದ್ ಜಾಕೀರ್ ಹುಸೇನ್, ಜಾಕೀರ್ ಹುಸೇನ್ ವಕೀಲ, ಅಬ್ದುಲ್ ಅಜೀಜ್, ಇಮಾಮ್ ಹುಸೇನ್, ಅನ್ವರ್ ಡ್ರೈವರ್, ಅಬ್ಬಾಸ್ ಹುಸೇನ್ ಕಬಡ್ಡಿ, ಇರ್ಫಾನ್ ಕಬಡ್ಡಿ, ಇಮ್ರಾನ್ ಇತರರಿದ್ದರು. ಜಾಲಹಳ್ಳಿ, ಮಸರಕಲ್, ಗಬ್ಬೂರು, ಗಾಣಧಾಳ, ಗಲಗ ಸೇರಿ ವಿವಿಧೆಡೆ ಬಕ್ರೀದ್ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net