

ಲಕ್ಷ್ಮೇಶ್ವರ: ದೀಪಾವಳಿ ಹಬ್ಬವನ್ನು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಲಾಯಿತು.
ದೀಪಾವಳಿ ಪಾಡ್ಯದ ದಿನ ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಅಂಗಡಿಗಳಿಗೆ, ಹಾಗೂ ಭಕ್ತರ ಮನೆಗಳಿಗೆ ತೆರಳಿ ಆಶೀರ್ವಾದ ನೀಡಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವದು ಬೆಳಕಿನ ಹಬ್ಬ ದೀಪಾವಳಿಯ ವಿಶೇಷತೆಯಾಗಿದೆ. ನಮ್ಮಲ್ಲಿರುವ ಅಜ್ಞಾನ ಎಂಬ ಅಂಧಕಾರವನ್ನು ಕಳೆದು ಜ್ಞಾನವೆಂಬ ಜ್ಯೋತಿ ಬೆಳಗಲಿ ಎಂದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಆನಂದ ಮೆಕ್ಕಿ, ಚಂದ್ರಣ್ಣ ಮೆಕ್ಕಿ, ಆರ್.ಸಿ. ಪಾಟೀಲ, ಡಾ. ಎಸ್.ಜಿ. ಹೂವಿನ, ಕುಬೇರಪ್ಪ ಮಹಾಂತಶೆಟ್ಟರ, ಗಂಗಾಧರ ಮೆಕ್ಕಿ, ಪ್ರವೀಣ ಹಾವೇರಿ, ವಿಜಯ ಮೆಕ್ಕಿ, ಶಿವಯೋಗಿ ವಡಕಣ್ಣವರ, ನಿಂಗಪ್ಪ ಬನ್ನಿ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ, ಶಿವಯೋಗಿ ಮಾನ್ವಿ, ಶಿವಾನಂದ ಮೆಕ್ಕಿ, ನೀಲಪ್ಪ ಹತ್ತಿ, ಚಂದ್ರಣ್ಣ ಮಹಾಂತಶೆಟ್ಟರ, ಬಸವರಾಜ ಮೆಣಸಿನಕಾಯಿ, ಬಂಗಾರೆಪ್ಪ ಮುಳಗುಂದ ಇತರರಿದ್ದರು.