ಕಲಿಯುವ ಹುಮ್ಮಸ್ಸು ಹೆಚ್ಚಿಸಲು ಪ್ರೇರಣೆಯಾಗಲಿ ಕಲಿಕಾಹಬ್ಬ

20MDG KALIKA HABBA
Published on

ಮುಂಡರಗಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಪ್ರಗತಿ ಕಾಣುವುದೇ ಕಲಿಕಾ ಹಬ್ಬದ ಆಯೋಜನೆ ಮುಖ್ಯ ಉದ್ದೇಶ. ಹೀಗಾಗಿ ಈ ಕಾರ್ಯಕ್ರಮ ಮೂಲಕ ಮಕ್ಕಳು ಕಲಿಯುವ ಹುಮ್ಮಸ್ಸು ಹೆಚ್ಚಾಗಲು ಪ್ರೇರಣೆಯಾಗಲಿವೆ ಎಂದು ಬಿಇಒ ಎಚ್.ಎಂ. ಪಢ್ನೇಶಿ ಹೇಳಿದರು.

ತಾಲೂಕಿನ ಮಲ್ಲಿಕಾರ್ಜುನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ಬಾಗೇವಾಡಿ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತಾ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಆಧಾರಿತ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಫಕೀರಗೌಡ ಮ್ಯಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್​ಡಿಎಂಸಿ ಉಪಾಧ್ಯಕ್ಷೆ ಪುಷ್ಪಾ ಮೇಟಿ, ಹಾಲನಗೌಡ ನಂದಗಾವಿ, ಮಲ್ಲಿಕಾರ್ಜುನ ಪಾಟೀಲ, ಮಂಜಪ್ಪ ವಡ್ಡರ, ಶಿವರೆಡ್ಡಿ ಬೆಣ್ಣಿಹಳ್ಳಿ, ಆನಂದ ರಾಮಣ್ಣವರ, ಹಾಲೇಶ ಈಟಿ, ಬೀರಪ್ಪ ಕುರಿ, ಭಾರತಿ ಪುರಂತಿ, ಅಂಕಲಿ, ನಾಗರಾಜ ಹಳ್ಳಿ, ಶಿಕ್ಷಕರಾದ ನಿಂಗಪ್ಪ ಪೂಜಾರ, ಮಾಲಾ ನಾವಿ, ಎಂ. ಮಡ್ಡಿ, ಗ್ರಾಮದ ಹಿರಿಯರು, ಬಾಗೇವಾಡಿ ಕ್ಲಸ್ಟರನ ವಿವಿಧ ಶಾಲಾ ಶಿಕ್ಷಕರು, ಶಿಕ್ಷಕಿಯರು, ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇತರರು ಇದ್ದರು.

ಬಾಗೇವಾಡಿ ಕ್ಲಸ್ಟರ್ ಸಿಆರ್​ಪಿ ಎಂ.ಸಿ. ಮರಡೂರಮಠ ಹಾಗೂ ಮುಖ್ಯಶಿಕ್ಷಕ ಶರಣಪ್ಪ ಕಲಾಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net