ನಾಡಿನ ಭಾಷೆ ಎಲ್ಲರ ಬದುಕಾಗಲಿ

ಪೋಟೋ ಕ್ಯಾಪ್ಶನ್-2
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿಯ ಶ್ರೀ ಕೆಂಚಾಂಬಾ ದೇವಸ್ಥಾನದ ವೃತ್ತದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ 70ನೇ ಕನ್ನಡರಾಜ್ಯೋತ್ಸವ ಆಚರಿಸಲಾಯಿತು.
Published on

ಆಲೂರು: ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಪರಿಭಾಷೆಯಾಗಬೇಕು, ಬದುಕಾಗಬೇಕು, ನಾವದನ್ನು ಪ್ರೀತಿಸಿ ಉಸಿರಾಗಿಸಿಕೊಳ್ಳಬೇಕು ಎಂದು ಶ್ರೀ ಕೆಂಚಾಂಬಾ ಅನ್ನದಾಸೋಹ ಸಮಿತಿಯ ಖಜಾಂಚಿ ಜಿ.ಜಿ.ನಾರಾಯಣ ಶರ್ಮ ಅಭಿಪ್ರಾಯಪಟ್ಟರು.

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿಯ ಶ್ರೀ ಕೆಂಚಾಂಬಾ ದೇವಸ್ಥಾನದ ವೃತ್ತದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯು ಏರ್ಪಡಿಸಿದ್ದ 70ನೇ ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಯಶೋದಾ ಮಾತನಾಡಿ, ವಿದ್ಯಾರ್ಥಿಗಳು ಮಾತೃಭಾಷೆಯನ್ನು ಹೃದಯಭಾಷೆಯಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೋಮೇಶ್ ಮಾತನಾಡಿ, ನಾಡಿನ ಉದಯದ ರೂವಾರಿ ಆಲೂರು ವೆಂಕಟರಾಯರು ಹಾಗೂ ಹಳದಿ ಕೆಂಪು ಸಂಯೋಜನೆಯ ಬಾವುಟದ ಕರ್ತೃ ರಾಮಚಂದ್ರ ರಾಯರನ್ನು ಸ್ಮರಿಸಿದರು. ಭಾಷಾ ಬಳಕೆಯ ವೈವಿಧ್ಯತೆಯ ಬಗ್ಗೆ ಬೆಳಕು ಚೆಲ್ಲಿದರು.

ಪ್ರೌಢಶಾಲೆಯ ಮತ್ತೊಬ್ಬ ಶಿಕ್ಷಕರಾದ ಮೋಹನ್ ಮಾತನಾಡಿದರು.

ಕೆಂಚಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲ್ , ಮಂಗಳ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸತ್ಯನಾರಾಯಣ್, ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net