ಅಂತರಂಗ ಶುದ್ಧವಾಗಿರಲಿ

3Aratal1
Published on

ಅರಟಾಳ: ಜೀವನ ಪಾವನವಾಗಲು ಅಂತರಂಗ ಶುದ್ಧವಾಗಿರಬೇಕು. ಯಾರ ಮನಸ್ಸು ಮಕ್ಕಳಂತೆ ಇರುತ್ತದೆಯೋ ಅವರು ದೇವರಿಗೆ ಪ್ರಿಯರಾಗಿರುತ್ತಾರೆ ಎಂದು ಬಾಡಗಿಯ ಸಂಗಯ್ಯ ಸ್ವಾಮೀಜಿ ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಚನ್ನಸಂಗಮೇಶ್ವರ ಸಾಧು ಮಹಾರಾಜರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧು ಸಂತರ ಜೀವನ ಪವಿತ್ರವಾದದ್ದು. ಜ್ಞಾನಿಗಳ ಮಾತು ಅಮೃತವಿದ್ದಂತೆ, ಅದನ್ನು ಗೌರವಿಸಬೇಕು. ಶ್ರೀ ಸದ್ಗುರು ಚನ್ನಸಂಗಮೇಶ್ವರ ಮಹಾರಾಜರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ. ಸತ್ಯ, ಅಸತ್ಯ ಅರಿತು ಶಾಂತಿಯಿಂದ ನಡೆಯಬೇಕು ಎಂದರು.

ಚನ್ನಸಿದ್ಧಲಿಂಗೇಶ್ವರ ಸಾಧು ಮಹಾರಾಜರು, ವಿಜಯ ಮೇತ್ರಿ, ವಿಠ್ಠಲ ಮುಧೋಳ, ಪ್ರಲ್ಹಾದ್ ಮಮದಾಪುರ, ಚನ್ನಪ್ಪ ನೇಮಗೌಡ, ದೇವೇಂದ್ರ ನೇಮಗೌಡ, ಮಹಾದೇವಿ ನೇಮಗೌಡ, ಜಯಶ್ರೀ ಮಮದಾಪುರ, ಮಾಲಾಶ್ರೀ ನೇಮಗೌಡ, ಪ್ರಿಯಾ ಮಮದಾಪುರ, ಸಂಗಮೇಶ ನೇಮಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net