

ಚಿಕ್ಕೋಡಿ ಗ್ರಾಮೀಣ: ಶ್ರಾವಣ ಮಾಸದದಲ್ಲಿ ಸತ್ಸಂಗ, ಶರಣರ ವಚನ ಶ್ರವಣ ಮಾಡಬೇಕು. ಆಲಿಸಿದ ನುಡಿಗಳನ್ನು ಅಳವಡಿಸಿಕೊಳ್ಳಬೇಕು. ನೆಮ್ಮದಿ ಬದುಕಿಗೆ ಸಂತರ ಆದರ್ಶ ಅವಶ್ಯ ಎಂದು ಕಾಡಾಪುರ ಸಿದ್ಧಾರೂಢಮಠದ ರಾಜಯೋಗಿ ನಾಗಲಿಂಗ ಸ್ವಾಮೀಜಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮ ಧರ್ಮ ಜಾಗತಿಯ ಹೆಜ್ಜೆಗಳಾಗಿವೆ. ಭಾರತೀಯ ಹಬ್ಬಗಳು ಸಂಸ್ಕೃತಿಯ ದ್ಯೋತಕಗಳು ಎಂದರು.
ಪಪಂ ಅಧ್ಯಕ್ಷ ಸುನೀಲ ಸಪ್ತಸಾಗರ ಮಾತನಾಡಿ, ಬದುಕು ಹಸನುಗೊಳಿಸಲು ಪುರಾಣ ಪ್ರವಚನಗಳು, ಸತ್ಸಂಗಗಳು ಅವಶ್ಯ ಎಂದರು.
ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಮಾಜಿ ಅಧ್ಯಕ್ಷ ಜಯಾನಂದ ಜಾಧವ, ಪಪಂ ಸದಸ್ಯ ಉಮೇಶ ಸಾತ್ವರ, ಬಸವೇಶ್ವರ ವಿವಿಧೋದ್ದೇಶ ಗ್ರಾಮೀಣ ಕಷಿ ಸಹಕಾರ ಸಂಘದ ಅಧ್ಯಕ್ಷ ಮಾರುತಿ ಮಾನೆ, ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಪ್ರಕಾಶ ರೇಂದಾಳೆ, ಉಪಾಧ್ಯಕ್ಷ ಜಗದೀಶ ಜಾಧವ, ಅಪ್ಪಾಸಾಬ ಸಾತ್ವರ, ಪಂಚಾಕ್ಷರಿ ಮಠಪತಿ, ರಾಮು ಬುಬನಾಳೆ, ಅರುಣ ಗುರವ, ಅಪ್ಪಾಸಾಹೇಬ ರೇಂದಾಳೆ, ಮಹಾದೇವ ಜೊಲ್ಲೆ, ಅನ್ನಪ್ಪ ಹಲಕಾಟೆ, ಗುರು ಪಾಟೀಲ, ಸುಭಾಷ ಬಿದ್ರೋಳೆ, ನಿಂಗಪ್ಪ ಬಿದ್ರೋಳೆ, ಹನುಮಂತ ನಾಯಿಕ ಇತರರಿದ್ದರು.