ಗುರು ಸ್ಥಾನಕ್ಕೆ ಚ್ಯುತಿ ಬಾರದಿರಲಿ

6Athani1
Published on

ಅಥಣಿ: ಬೋಧಕರು ಗುರು ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಹೇಳಿದರು.

ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ `ದಕ್ಷ ಶಿಕ್ಷಕ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಭಾರತಿಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ಅರಟಾಳದ ಮಹಾದೇವ ಮಡಿವಾಳ, ಬಳವಾಡದ ರಂಜನಾ ಚೌಗಲಾ, ಮೌನೇಶ ಬಡಿಗೇರ ಅವರಿಗೆ `ದತ್ತ ಶಿಕ್ಷಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಶಿಕ್ಷಕರಾದ ಕಿರಣ ಬುರ್ಲಿ, ರಾಜು ಕೆಂಚಣ್ಣವರ, ಸಂತೋಷ ಅಸ್ಕಿ, ಎನ್.ಎಂ.ಚಿಕ್ಕಮಠ, ಟಿ.ಎ.ಮೊಗೆರ, ವಿಶ್ವನಾಥ ಸೌದಾಗರ, ಚಂದ್ರಶೇಖರ ಮೊಗೆರ, ಜಿ.ಎಂ.ಸಡ್ಡಿ, ಆರ್.ಡಿ.ಧರಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net