

ಗೋಕಾಕ: ಜಂಗಮ ಸಮುದಾಯದ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಕೈಗೊಂಡು ವಿವಿಧ ೇತ್ರಗಳಲ್ಲಿ ಸಾಧನೆಗೈಯುವ ಮೂಲಕ ಸಮುದಾಯದ ಹಿರಿಮೆ ಹೆಚ್ಚಿಸಬೇಕು ಎಂದು ಜಂಗಮ ೇಮಾಭಿವೃದ್ಧಿ ಸಂದ ಪ್ರಕಾಶ ಕಂಬಿ ಹೇಳಿದರು.
ನಗರದ ಜ್ಞಾನ ಮಂದಿರದಲ್ಲಿ ಜಂಗಮ ೇಮಾಭಿವೃದ್ಧಿ ಸಂ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಜಂಗಮ ಸಮುದಾಯದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಣ ನೀಡುವ ಜತೆಗೆ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡ ಅಶೋಕ ಪೂಜೇರಿ ಮಾತನಾಡಿ, ಜಂಗಮ ಸಮುದಾಯದಲ್ಲೂ ಸಾಕಷ್ಟು ಪ್ರತಿಭೆಗಳಿದ್ದು, ಸೂಕ್ತ ಮಾರ್ಗದರ್ಶನ ಹಾಗೂ ಆರ್ಥಿಕ ನೆರವು ಅಗತ್ಯವಾಗಿದೆ. ಸಮಾಜದಲ್ಲಿ ಜಂಗಮ ೇಮಾಭಿವೃದ್ಧಿ ಸಂ ಉತ್ತಮ ಕೆಲಸ ಮಾಡುತ್ತಿದೆ. ಸದಾ ಸಹಕಾರ ಇದೆ ಎಂದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಸಾಧನೆಗೈದ ಗೋಕಾಕ ತಾಲೂಕಿನ 60ಕ್ಕೂ ಅಧಿಕ ಜಂಗಮ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸುವರ್ಣಾತಾಯಿ ಹೊಸಮಠ, ರವೀಂದ್ರ ಹಿರೇಮಠ, ಶೈಲಜಾ ಮಠದ ಹಾಗೂ ಜಂಗಮ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.