ರಕ್ತದಾನದ ಮಹತ್ಕಾರ್ಯ ಹೆಚ್ಚಾಗಲಿ

ಚಿಕ್ಕಬಳ್ಳಾಪುರದ ಸಿವಿವಿ ಕ್ಯಾಂಪಸ್​ನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾಜಿ ಸಚಿವ ಡಾ ಕೆ.ಸುಧಾಕರ್​ ದಾನಿಗಳಿಗೆ ರಕ್ತದಾನ ಪ್ರಮಾಣ ಪತ್ರ ನೀಡಿದರು. ಕೆ.ವಿ ಮತ್ತು ಪಂಚಗಿರಿ ಶಿಣ ದತ್ತಿಗಳ ಅಧ್ಯ ಕೆ.ವಿ.ನವೀನ್​ ಕಿರಣ್​, ಕೆ.ವಿ.ದೈಹಿಕ ಶಿಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್​.ವೆಂಕಟೇಶ್​ ಮತ್ತಿತರರು ಇದ್ದರು.
Raktha danada Mahatkarya Hecchali
Published on


ಮಾಜಿ ಸಚಿವ ಡಾ.ಕೆ.ಸುಧಾಕರ್​ ಸಲಹೆ : ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಆರೋಗ್ಯವಂತ ವ್ಯಕ್ತಿಗಳು ಕಡ್ಡಾಯವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್​ ಸಲಹೆ ನೀಡಿದರು.
ಇಲ್ಲಿನ ಸಿವಿವಿ ಕ್ಯಾಂಪಸ್​ನಲ್ಲಿ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಯು ದತ್ತಿ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಶಸ ಚಿಕಿತ್ಸೆ ವೇಳೆ ಗರ್ಭಿಣಿಯರು, ಅಪಘಾತಗಳಲ್ಲಿ ಗಾಯಗೊಂಡವರು ರಕ್ತ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಇಂತಹವರ ಪ್ರಾಣವನ್ನು ಉಳಿಸಲು ರಕ್ತದಾನದ ಮಹಾತ್ಕಾರ್ಯ ಹೆಚ್ಚಾಗಬೇಕು ಎಂದರು.
ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಹೊಸ ಚೈತನ್ಯ ಬರುತ್ತದೆ. ದೇಹದಲ್ಲಿನ ಕೊಬ್ಬಿನಾಂಶ ಕಡಿಮೆಯಾಗಲಿದೆ. ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಆದರಿಂದ ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ 3 ಬಾರಿ ರಕ್ತದಾನ ಮಾಡಲು ಮುಂದಾಗಬೇಕು. ಇದರ ಬಗೆಗಿನ ತಪ್ಪು ಕಲ್ಪನೆಯನ್ನು ಬಿಡಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಮಾತನಾಡಿ, ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಟವಾದ ಪುಣ್ಯದ ಕೆಲಸ. ಇದು ಜೀವನ್ಮರಣ ಹೋರಾಟದಲ್ಲಿನ ಜನರ ಪ್ರಾಣವನ್ನು ಉಳಿಸುತ್ತದೆ ಎಂದರು.
ಕೆ.ವಿ ಮತ್ತು ಪಂಚಗಿರಿ ಶಿಣ ದತ್ತಿಗಳ ಅಧ್ಯ ಕೆ.ವಿ.ನವೀನ್​ ಕಿರಣ್​ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಬ್ಬರು ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಯಾವುದಾದರೂ ಒಂದು ರಚನಾತ್ಮಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಸ್ಥೆಯ ಸದಸ್ಯರಾದ ಬಿ.ಮುನಿಯಪ್ಪ, ಲೀಲಾ ದೇವರಾಜ್​, ನಿರ್ಮಲಾ ಪ್ರಭು, ದತ್ತಿ ಆಡಳಿತಾಧಿಕಾರಿ ಸಾಯಿ ಪ್ರಭು, ಕೆ.ವಿ.ದೈಹಿಕ ಶಿಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್​.ವೆಂಕಟೇಶ್​ ಮತ್ತಿತರರು ಇದ್ದರು.


1185 ಯೂನಿಟ್​ ರಕ್ತ ಸಂಗ್ರಹ:
ಮೊದಲಿನಿಂದಲೂ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಯೂನಿಟ್​ ರಕ್ತ ಸಂಗ್ರಹಿಸುವ ಮೂಲಕ ಶಿಕ್ಷಣ ಸಂಸ್ಥೆಯು ಜಿಲ್ಲಾ ಮಟ್ಟದ ದಾಖಲೆ ಬರೆಯುತ್ತಿದೆ. ಅದರಂತೆ ಬುಧವಾರ ಬರೋಬ್ಬರಿ ಒಂದೇ ದಿನ 1,185 ಯೂನಿಟ್​ ರಕ್ತ ಸಂಗ್ರವಾಗಿದೆ. ಸಂಸ್ಥೆಯ ಸಿಬ್ಬಂದಿ, ಸಂ ಸಂಸ್ಥೆಗಳ ಪದಾಧಿ-ಕಾರಿಗಳು ಸೇರಿದಂತೆ ಹಲವರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net