

ಶ್ರೀನಿವಾಸಪುರ : ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ 36 ಸಾವಿರ ರೂ.ನೀಡಬೇಕು, ಗ್ರಾಚ್ಯುಟಿ, ನಿವೃತ್ತಿ ವೇತನ ಹಾಗೂ ಜಲಗಾರರಿಗೆಗ್ಲೌಸ್, ಬ್ಯಾಟರಿ, ಶೂ ಕೂಡಲೇ ವಿತರಿಸಬೇಕು ಎಂಬುದು ಸೇರಿದಂತೆ ಗ್ರಾಪಂ ನೌಕರರಿಗೆ ಸರ್ಕಾರ ನೀಡಿರುವ ಆದೇಶ, ಭರವಸೆಗಳು ಕೂಡಲೇ ಜಾರಿಯಾಗಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂದ ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಪಂ ನೌಕರರ ಸಂದ 5ನೇ ಸಮ್ಮೇಳನಕ್ಕೆ ಚಾಲನೆ ನೀಡಿ ವಾತನಾಡಿದರು.
ಪ್ರಾಂತ ರೈತ ಸಂದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ವಾತನಾಡಿ, 1995ರಲ್ಲಿ ವಾರುತಿ ವಾನ್ಪಡೆ ಅವರ ನೇತೃತ್ವದಲ್ಲಿ ರಾಜ್ಯದಲ್ಲೇ ಸಂಟನೆ ಪ್ರಾರಂಭಿಸಿ, ಕೋಲಾರ ಜಿಲ್ಲೆಯಾದ್ಯಂತ ಈ ಸಂಟನೆ ಕಟ್ಟಲು ಶ್ರಮಿಸಿದೆವು. ಅಂದಿನಿಂದ ಇಲ್ಲಿಯವರೆಗೆ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮರಶೀಲ ಹೋರಾಟ ನಡೆಸಿದ್ದರಿಂದ ಎರಡು ನೂರು ಇದ್ದ ಸಂಬಳ 16,000ಕ್ಕೆ ಹೆಚ್ಚಳ ವಾಡಲಾಗಿದೆ. ಆದರೆ, ನಮ್ಮನ್ನು ಆಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಮ್ಮ ಸಂಟನೆಯ ಒಗ್ಗಟ್ಟನ್ನು ಮುರಿಯಲುನಿರಂತರ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿತಾವುಗಳು ಸಂಟನೆ ಬಲಿಷ್ಠವಾಗಿ ಕಟ್ಟುವುದರ ಮುಖಾಂತರ ಮುಂದಿನ ದಿನಗಳಲ್ಲಿ ಬರುವಂತಹ ಸಮಸ್ಯೆಗಳನ್ನು ಎದರಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಾಂತ ರೈತ ಸಂದ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುವಾರ್ ವಾತನಾಡಿ, ಗ್ರಾಪಂನಿಂದ ಲೋಕಸಭೆವರೆಗೂ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಾತನಾಡುವ ಜನಪ್ರತಿನಿಧಿಗಳಿಲ್ಲದೆ ನಾವು ಅತಂತ್ರರಾಗಿದ್ದೇವೆ. ಹಾಗಾಗಿ ಇನ್ನು ಮುಂದಾದರು ತಾವೆಲ್ಲರೂ ನಮ್ಮ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಳನ್ನು ಆಯ್ಕೆ ವಾಡಲು ನಾವು ಈಗಿನಿಂದಲೇ ಸನ್ನಧ್ಧರಾಗಬೇಕಿದೆ ಎಂದರು. ಇದೇ ವೇಳೆ ನೂತನವಾಗಿ ಅಸ್ತಿತ್ವಕ್ಕೆ ಬಂದ ತಾಲೂಕು ಮಟ್ಟದ ಸಂಕ್ಕೆ ಪದಾಧಿಕಾರಿಗಳನ್ನು ಆಯ್ಕೆ ವಾಡಲಾಯಿತು.
ಬಿಸಿ ಊಟ ನೌಕರರ ಸಂದ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ಅನಂತಮ್ಮ, ತಾಪಂ ವ್ಯವಸ್ಥಾಪಕ ಮಂಜುನಾಥ್, ದಲಿತ ಹಕ್ಕುಗಳ ಸಮಿತಿ ತಾಲೂಕು ಮುಖಂಡ ಶಿವರಾಜ್ ಕುವಾರ್, ರೆಡ್ಡಪ್ಪ, ಶಿವಪ್ಪ ಇದ್ದರು.