

ನಾಪೋಕ್ಲು: ಉರುಸ್ ಸಮಾರಂಭವು ಧಾರ್ಮಿಕ ಹಾಗೂ ಪಾರಂಪರಿಕವಾಗಿವಾದ್ದು, ಇದರ ಸದುದ್ದೇಶದ ಎಲ್ಲೆಡೆ ಪಸರಿಸಲಿ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಕಕ್ಕಬೆ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವೈಕೋಲ್ ಪುಳಿಜೋಂ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾಗದಲ್ಲಿ ಉರುಸ್ ಅನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾ ಬಂದಿದ್ದು, ಸಮಾರಂಭದಲ್ಲಿ ಭಾಗವಹಿದ್ದು ತನಗೆ ಅತೀವ ಸಂತಸ ಉಂಟು ಮಾಡಿದೆ ಎಂದರು.
ಪ್ರಮುಖರಾದ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಮೊಯಿದು, ಸಂಪನ್ ಅಯ್ಯಪ್ಪ, ಹಾಗೂ ಪ್ರಮುಖರಾದ ಸೌಕತ್ ಅಲಿ, ವಿ.ಎಂ.ಉಸ್ಮನ್ ಹಾಜಿ, ಬಾಚಮಂಡ ಲವ ಚಿಣ್ಣಪ್ಪ, ಅಹಮ್ಮದ್ ಹಾಜಿ, ಉದಿಯಡ ಸುಭಾಷ್, ಮೋಹನ್, ಹುಸೇನ್, ಅಬ್ಬು ,ಉದಿಯಂಡ ಮೋಹನ್ ಜಮಾಯತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.