

ಹುಬ್ಬಳ್ಳಿ: ಜನಪದ ಕಲಾಬಳಗ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೂಡಿ ಆಶ್ರಯದಲ್ಲಿ ಇಲ್ಲಿಯ ಗೋಕುಲ ರಸ್ತೆಯ ಪ್ರೊ.ಕೆ.ಎಸ್. ಶರ್ಮಾ ಸಭಾ ಭವನದಲ್ಲಿ ಭಾನುವಾರ ದೊಡ್ಡಾಟ ಹಾಡುಗಾರಿಕೆ ಮತ್ತು ಅಭಿನಯ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಉದ್ಘಾಟಿಸಿ ಮಾತನಾಡಿ, ಜಾನಪದರ ಸೊಗಡು ಮತ್ತು ಅದರ ಮೌಲ್ಯಗಳನ್ನ ಎತ್ತಿ ಹಿಡಿಯುವ ಕಾರ್ಯಗಳು ನಿರಂತರವಾಗಿ ಅಗುತ್ತಿರಬೇಕು. ತರಬೇತಿಗಾಗಿ ಆಯ್ದುಕೊಂಡಿರುವ ಅಂಗುಲಿಮಾಲ ಕಥೆ ಬಹಳ ಮೌಲ್ಯಯುತ ವಿಷಯ. ಈ ಮೂಲಕ ತಥಾಗತ ಗೌತಮ ಬುದ್ಧರ ಸಂದೇಶ ದೊಡ್ಡಾಟ ವೇದಿಕೆ ಮೂಲಕ ಹೆಚ್ಚು ಜನರಿಗೆ ತಲುಪುವಂತಾಗಲಿ ಎಂದರು.
ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ. ವಿಜಯಲಕ್ಷ್ಮೀ ಗೇಟಿ, ಡಾ. ಲತೀಫ್ ಕುನ್ನಿಭಾವಿ, ಶಹಜಹಾನ್ ಮುದಕವಿ ಮಾತನಾಡಿ, ಈ ಶಿಬಿರ ಒಂದು ತಿಂಗಳವರೆಗೆ ಉಚಿತವಾಗಿರುತ್ತದೆ ಎಂದರು.
ಸಿದ್ಧರಾಮ ಹಿಪ್ಪರಿಗಿ, ವೀರಭದ್ರಯ್ಯ ಹಿರೇಮಠ, ಶಿವರುದ್ರಪ್ಪ ಬಡಿಗೇರ, ಬಿರೇಶ ತಳ್ಳಿಕೇರಿ, ಶಿವಾನಂದ ವಾಲೀಕಾರ, ಶಿವಾನಂದ ಗುರಂ, ರಮೇಶ ಕರಬಸಮ್ಮನವರ, ಈಶ್ವರ ಬಡಿಗೇರ, ಈರಣ್ಣ ಬಡಿಗೇರ, ಗದಿಗಯ್ಯ ಹಿರೇಮಠ, ಡಾ. ರಾಮು ಮೂಲಗಿ ಇತರರು ಇದ್ದರು.