ವರ್ಷವೀಡಿ ಭಗವಾಧ್ವಜ ಹಾರಾಡಲಿ

HNL BHAGHAWA DWAJA
Published on

ಹಾನಗಲ್ಲ: ಹಿಂದುಗಳ ಹೊಸ ವರ್ಷದ ಯುಗಾದಿ ಹಬ್ಬದ ಆಚರಣೆಯನ್ನು ಭಗವಾಧ್ವಜ ಹಾರಿಸುವ ಮೂಲಕ ಆಚರಿಸುವ ಸಂಪ್ರದಾಯ ಆರಂಭಗೊಳ್ಳಬೇಕು ಎಂದು ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಹೇಳಿದರು.

ಯುಗಾದಿ ಹಬ್ಬದ ನಿಮಿತ್ತ ತಾಲೂಕಿನ 2000ಕ್ಕೂ ಅಧಿಕ ಮಠ-ಮಂದಿರಗಳಲ್ಲಿ ಭಗವಾಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಪಟ್ಟಣದ ಆನಂದೇಶ್ವರ ದೇವಸ್ಥಾನದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಧರ್ಮಧ್ವಜವು ನಮ್ಮ ಧರ್ಮದ ಸಂಕೇತವಾಗಿದೆ. ಧರ್ಮ ರಕ್ಷಣೆಗೆ ವರ್ಷದ ಮೊದಲ ಹಬ್ಬವಾದ ಯುಗಾದಿ ನಾಂದಿ ಹಾಡುತ್ತದೆ. ಧರ್ಮ ಪಾಲನೆಯ ಕೇಂದ್ರವಾಗಿರುವ ಮಠ-ಮಂದಿರಗಳ ಮೇಲೆ ಭಗವಾಧ್ವಜ ವರ್ಷವಿಡೀ ಹಾರಾಡುತ್ತಿರಬೇಕು. ಸನಾತನ ಧರ್ಮದ ಜಾಗೃತಿಗಾಗಿ ಕುಂಭಮೇಳದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ 2000ಕ್ಕೂ ಅಧಿಕ ಮಠ-ಮಂದಿರಗಳಿಗೆ ಭಗವಾಧ್ವಜ ತಲುಪಿಸಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದರು.

ಆನಂದೇಶ್ವರ ಯುವಕ ಮಂಡಳದ ಸದಸ್ಯರು ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಗಣ್ಯರಾದ ಗಣೇಶ ಮೂಡ್ಲಿಯವರ, ಜಗದೀಶ ಸಿಂಧೂರ, ರಾಮು ಯಳ್ಳೂರ, ರವಿಚಂದ್ರ ಪುರೋಹಿತ, ಬಸವರಾಜ ಹಾದಿಮನಿ, ಮನೋಜ ಕಲಾಲ, ಪ್ರವೀಣ ಸುಲಾಖೆ, ಅಣ್ಣಪ್ಪ ಚಾಕಾಪುರ, ಗುರು ಗೊಲ್ಲರ, ಮಂಜುನಾಥ ಬಸವಂತಕರ, ಅಮಿತ್ ನೆಲೋಗಲ್, ವಿನಾಯಕ ಕಮಡೊಳ್ಳಿ, ರಾಜು ಕಮಾಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net