ಹಬ್ಬಗಳ ಸಡಗರ ಸಂಭ್ರಮ ಮರುಕಳಿಸಲಿ

chaitanyanagar
Published on

ಹುಬ್ಬಳ್ಳಿ: ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಹಬ್ಬ ಹರಿದಿನಗಳ ಸಂಭ್ರಮ ಇಂದು ಕಾಣದಾಗಿದೆ. ಹಬ್ಬಗಳ ಸಂಭ್ರಮ ಸಡಗರ ಮತ್ತೆ ಮರುಕಳಿಸಲಿ ಎಂದು ಚೈತನ್ಯನಗರ ಗಜಾನನ ಉತ್ಸವ ಸಮಿತಿಯ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಚೈತನ್ಯನಗರದ ಗಜಾನನ ಉತ್ಸವ ಸಮಿತಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಹಬ್ಬಗಳ ಮಹತ್ವ ತಿಳಿದಿಲ್ಲ. ಅವುಗಳನ್ನು ತಿಳಿಸುವ ಕಾರ್ಯ ಇಂಥ ಕಾರ್ಯಕ್ರಮ, ಉಪನ್ಯಾಸದ ಮೂಲಕ ಆಗಲಿ ಎಂದರು.

ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಜನಪದ ಸಾಹಿತಿ, ಕಲಾವಿದ ಡಾ. ರಾಮು ಮೂಲಗಿ ಅವರು ಹಬ್ಬ ಹರಿದಿನಗಳ ಮಹತ್ವ, ಆಚರಣೆಯ ಹಿನ್ನೆಲೆಗಳ ಕುರಿತು ಉಪನ್ಯಾಸ ನೀಡಿದರು. ಲಕ್ಷ್ಮೀಬಾಯಿ ಸತ್ತರಸಾಲಿ, ಲೀಲಾ ಹಿರೇಮಠ, ಸುಲೋಚನಾ ಕುಂಬಾರ, ಗಿರಿಜಾ ಚಾರಖಾನೆ,ಉಮಾ ಬುಳ್ಳ, ರತ್ನಕ್ಕ ಹುರಕಡ್ಲಿ, ರತ್ನ ಹೂಸಪೇಟೆ, ಶೋಭಾ ಮಾನೆ, ಶಿವಯೋಗಿ ಮಾರ್ಕಂಡೆ, ಇತರರು ಇದ್ದರು. ಡಾ. ರಾಮು ಮೂಲಗಿ ಅವರನ್ನು ಸನ್ಮಾನಿಸಲಾಯಿತು.

ವಿಶ್ವೇಶ್ವರ ಕುಲಕರ್ಣಿ ನಿರೂಪಿಸಿದರು. ಶಂಕರ ಪುರೋಹಿತ ಸ್ವಾಗತಿಸಿದರು. ವಿರುಪಾಕ್ಷ ಚಾರ್ಖಾನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net