ಪರಿವಾರದ ಸಮಾಜಮುಖಿ ವ್ಯವಹಾರ ಉತ್ತರೋತ್ತರವಾಗಿ ಬೆಳೆಯಲಿ

rbk 9-1
ರಬಕವಿ ಹಜಾರೆ ಬಜಾರಗೆ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಭೇಟಿ ನೀಡಿ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿದರು.
Published on

ರಬಕವಿ/ಬನಹಟ್ಟಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗಳೂ ಇಂಥಹ ಗುಣಮಟ್ಟದ ಆಹಾರ, ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸುತ್ತಿರುವುದು ಸಂತಸ ತಂದಿದೆ. ಹಜಾರೆ ಬಜಾರ ಹಾಗೂ ಅವರ ಪರಿದಾವರ ಸಮಾಜಮುಖಿ ವ್ಯವಹಾರ ಉತ್ತರೋತ್ತರವಾಗಿ ಬೆಳೆಯಲಿ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ಹಜಾರೆ ಬಜಾರ್‌ಗೆ ಬುಧವಾರ ಬೆಳಗ್ಗೆ ಭೇಟಿ ನೀಡಿ ನವರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಜಾರೆ ಬಜಾರ್‌ಗೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿರುವುದನ್ನು ಕಂಡು ಸಂತಸ ತಂದಿದೆ. ಸಗಟು ದರದಲ್ಲಿ ಕಿರುಕುಳ ಖರೀದಿಸುವ ಗ್ರಾಹಕರಿಗೆ ನೀಡುತ್ತಿರುವ ದರಗಳು ಗ್ರಾಹಕರ ಮನಸ್ಸಲ್ಲಿ ಉಳಿದಿವೆ. ನಾವೂ ಮಳಿಗೆ ವೀಕ್ಷಿಸಿದಾಗ ಇಲ್ಲಿನ ವಸ್ತುಗಳ ಗುಣಮಟ್ಟ ಹಾಗೂ ದರದಲ್ಲೂ ಕಡಿಮೆ ಅನ್ನಿಸುತ್ತಿವೆ ಎಂದು ಶ್ರೀಗಳು ತಿಳಿಸಿದರು.

ದಸರಾ ನಿಮಿತ್ತ ನಾವು ಹುಬ್ಬಳ್ಳಿ ಸಮೀಪದ ಸಂಶಿ ಬ್ರಹ್ಮಾನಂದ ಆಶ್ರಮದಲ್ಲಿ ಪೂಜಾ ಸಮಾರಂಭದಲ್ಲಿ ಭಾಗಿಯಾದ ಕಾರಣ ಉದ್ಘಾಟನಾ ಸಮಾರಂಭದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹಜಾರೆಯವರ ವ್ಯಾಪಾರ ವಹಿವಾಟು ಸುಗಮವಾಗಿ ಸಾಗಲಿ. ಅದಕ್ಕೆ ಬ್ರಹ್ಮಾನಂದ ಅಜ್ಜನವರ ಆಶೀರ್ವಾದ ಸದಾಕಾಲವೂ ಇರುತ್ತದೆ ಎಂದರು.

ಹಜಾರೆ ಬಜಾರನ ಮಾಲೀಕ ಸತೀಶ ಹಜಾರೆ ಮಾತನಾಡಿ, ನಮ್ಮ ಪರಿಶ್ರಮಕ್ಕೆ ಆ ಪರಮಾತ್ಮ ಎಲ್ಲವನ್ನೂ ನೀಡಿದ್ದಾನೆ. ನಮ್ಮ ಬೆಳವಣಿಗೆಗೆ ಮತ್ತು ಆದರ್ಶಗಳಿಗೆ ವಿಆರ್‌ಎಲ್ ಮಾಲೀಕ ವಿಜಯ ಸಂಕೇಶ್ವರ ಅವರ ಸಲಹೆಗಳು, ಕೆಲವು ವ್ಯಾಪಾರೀಕರಣದ ಅಂಶಗಳನ್ನು ನಾವೂ ನಮ್ಮ ವ್ಯವಹಾರದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.

ಗಣಪತರಾವ ಹಜಾರೆ, ಪ್ರಸನ್ನ ಹಜಾರೆ, ಪ್ರವೀಣ ಹಜಾರೆ, ದೀಪು ಹಜಾರೆ, ಚಡಚಣದ ಬಾಹುಬಲಿ ಮುತ್ತಿನ ಸಹೋದರರು ಹಾಗೂ ಹಜಾರೆ ಪರಿವಾರದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net