

ಕುಮಟಾ: ಇಲ್ಲಿನ ಡಾ.ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿ.ಬಿ.ಎ. ವಿಭಾಗದಲ್ಲಿ ಮ್ಯಾನೇಜ್ವೆುಂಟ್ ಫೆಸ್ಟ್ ಮತ್ತು ಪ್ರದರ್ಶನ ಮೇಳ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಕಾಲೇಜ್ ಸೊಸೈಟಿ ಕಾರ್ಯಾಧ್ಯಕ್ಷ ಎಚ್.ಕೆ. ಶಾನಭಾಗ ಮಾತನಾಡಿ, ಇಂತಹ ಪ್ರದರ್ಶನ ಮೇಳದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಸಹಾಯಕವಾಗುತ್ತವೆ. ಂತಹ ಫೆಸ್ಟ್ಗಳು ಪದೇಪದೆ ನಡೆಯುತ್ತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯು ಡಾ. ರೇವತಿ ಆರ್. ನಾಯ್ಕ, ಬಾಳಿಗಾ ವಾಣಿಜ್ಯ ಪಿಯು ವಿಭಾಗದ ಪ್ರಾಚಾರ್ಯ ಪ್ರೊ.ಎನ್.ಜಿ. ಹೆಗಡೆ, ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ತರಬೇತುದಾರರಾದ ಪ್ರತೀಕ್ಷಾ ಮಾತನಾಡಿದರು.
ಬಿಬಿಎ ವಿಭಾಗದ ಸಂಯೋಜಕ ಪ್ರೊ.ಸಂತೋಷ ಶಾನಭಾಗ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಮೋಹಿನಿ ನಾಯ್ಕ, ಪ್ರೊ. ನಿರ್ಮಲಾಪ್ರಭು, ಪ್ರೊ. ಸುಷ್ಮಾ ನಾಯ್ಕ ಹಾಗೂ ಪ್ರೊ. ನಿಖಿತಾ ಕಾರ್ಯಕ್ರಮ ನಿರ್ವಹಿಸಿದರು.
ಬಿಬಿಎ ವಿದ್ಯಾರ್ಥಿಗಳು ಮ್ಯಾನೇಜಮೆಂಟ್ ವಿಷಯದ ವಿವಿಧ ಆಯಾಮಗಳ ಮೇಲೆ ತಾವು ತಯಾರಿಸಿದ ವಿಭಿನ್ನ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯವಿಧಾನವನ್ನು ವಿವರಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸ್ಥಾಪಿಸಲ್ಪಟ್ಟ ವಿವಿಧ ವ್ಯಾಪಾರಿ ಮಳಿಗೆಗಳು ಗಮನ ಸೆಳೆದವು.