ಯೋಧರ ಕನಸು ನನಸಾಗಿಸುವ ಕೆಲಸವಾಗಲಿ

ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಬಳಗದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಬಳಗದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
Published on

ಸರಗೂರು: ಯೋಧರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು ಎಂದು ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಬಳಗದ ಕಾರ್ಯದರ್ಶಿ ಎಚ್.ಕೆ.ಸಿದ್ದರಾಜು ಹೇಳಿದರು.

ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ತಾಲೂಕಿನ ಹಾದನೂರು ಗ್ರಾಮದಲ್ಲಿ ಬಳಗದ ವತಿಯಿಂದ ಬುಧವಾರ ಸಂಘದ ನಾಮಫಲಕವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಬ್ರಿಟಿಷ್ ಸರ್ಕಾರ ನಿರ್ಮಿಸಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಿದ್ದರು ಎಂದು ಸ್ಮರಿಸಿದರು.

ಗ್ರಾಮದ ಮುಖಂಡ ಚಿದಾನಂದ ಮಾತನಾಡಿ, ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜ.1 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮದ ಹಿರಿಯ ಮುಖಂಡರಾದ ಮಹದೇವಯ್ಯ, ಚಿಕ್ಕ ಸಿದ್ದಯ್ಯ, ಗಡಿ ಯಜಮಾನ ರಾಜಯ್ಯ, ಗೋಪಾಲಯ್ಯ, ಸಿದ್ದಯ್ಯ, ಅಂಗಡಿ ರಾಜು, ಬಸವಯ್ಯ, ಮರಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಭೀಮಾ ಕೋರೆಗಾಂವ್ ಹೋರಾಟದ ವಿಜಯೋತ್ಸವ ಘಟನೆ ಕುರಿತು ಸಂಜೆ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.

ಬಳಗದ ಅಧ್ಯಕ್ಷ ಚಿಕ್ಕಣ್ಣ, ಗೌರವಾಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಚೆಲುವರಾಜು, ಕಾರ್ಯದರ್ಶಿ ಎಚ್.ಕೆ.ಸಿದ್ದರಾಜು, ಸಹ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸಿದ್ದರಾಜು, ಸದಸ್ಯರಾದ ಪಾಪಣ್ಣ, ನಾಗೇಂದ್ರ, ನಂಜುಂಡಸ್ವಾಮಿ, ಸಣ್ಣಸ್ವಾಮಿ, ಕೆಂಪು ಸಿದ್ದು, ಮಣಿಕಂಠ, ಪ್ರಸನ್ನ, ಕುಮಾರ್. ಎಚ್.ಡಿ.ಪುಟ್ಟರಾಜು, ಕುಮಾರ್, ಚಿಕ್ಕಣ್ಣ, ಲಕ್ಷ್ಮಯ್ಯ, ಮುನಿಯಾ, ರಮೇಶ್, ಕೀರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net