ಸಮ ಸಮಾಜದ ಕನಸು ನನಸಾಗಲಿ

2
ಹೊಳೆನರಸೀಪುರದಲ್ಲಿ ಛಾಯಾಗ್ರಾಹಕರ ಸಂಘದಿಂದ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಲಾಯಿತು.
Published on

ಹೊಳೆನರಸೀಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಜೀವನ ಸಾಧನೆ ನಮಗೆಲ್ಲ ದಾರಿ ದೀಪ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಧನ್ಯಕುಮಾರ್ ತಿಳಿಸಿದರು.

ಛಾಯಾಗ್ರಾಹಕರ ಸಂಘದಿಂದ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮತ್ತು ಸಮ ಸಮಾಜದ ನಿರ್ಮಾಣದ ಕನಸನ್ನು ನನಸು ಮಾಡಬೇಕಿದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಜಿ.ಪ್ರಕಾಶ್, ಉಪಾಧ್ಯಕ್ಷ ಎಂ.ಬಿ.ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನರಸಿಂಹ, ಸಹ ಕಾರ್ಯದರ್ಶಿ ಎಚ್.ಸಿ.ಅಶೋಕ್, ಸಂಘಟನಾ ಕಾರ್ಯದರ್ಶಿ ವಿನಾಯಕ, ಚಂದ್ರು, ಖಜಾಂಚಿ ಸುರೇಶ್, ಪದಾಧಿಕಾರಿಗಳಾದ ಪಾಪಯ್ಯ, ರಘುಕುಮಾರ್, ಎಚ್.ಕೆ.ರಾಘವೇಂದ್ರ, ವಿರೂಪಾಕ್ಷ, ಶ್ರೀಪತಿ, ಸಾಗರ್, ಶೋಭಾ, ಶಂಕರ್, ಸಂತೋಷ್, ಲೋಕೇಶ್, ಸುನೀಲ್, ಶ್ರೀನಿವಾಸ, ರಾಘವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net