ಧರ್ಮಸ್ಥಳ ವಿರುದ್ಧದ ಷಡ್ಯಂತ್ರಿಗಳಿಗೆ ತಕ್ಕ ಶಿಕ್ಷೆಯಾಗಲಿ

New Tenginakayi mahesh New
Published on

ಹುಬ್ಬಳ್ಳಿ : ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮತ್ತು ಷಡ್ಯಂತ್ರ ರಚಿಸಿದವರಿಗೆ ತಕ್ಕ ಶಿಕ್ಷೆಯಾಗಲೆಂಬ ಉದ್ದೇಶದಿಂದ ರಾಜ್ಯಾದ್ಯಂತದ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಸೆ. 1ಕ್ಕೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಗಣೇಶೋತ್ಸವ ಅಂಗವಾಗಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ವತಿಯಿಂದ ಇಲ್ಲಿನ ರಾಣಿ ಚನ್ನಮ್ಮ ಮೈದಾನದಲ್ಲಿ ಸೆ. 27ರಂದು ಪ್ರತಿಷ್ಠಾಪಿಸುವ ಶ್ರೀಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮಂಟಪದ ಹಾಲಗಂಬ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸೆ. 1ರಂದು ಧರ್ಮಸ್ಥಳ ಚಲೋಗೆ ರಾಜ್ಯ ಬಿಜೆಪಿ ಕರೆ ನೀಡಿದೆ. ಕಳೆದ ಮೂರು ದಿನಗಳಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಷಡ್ಯಂತ್ರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದುಷ್ಟಶಕ್ತಿಗಳಿಗೆ, ಸಮಾಜ ಘಾತುಕರಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂಂದು ಹೇಳಿದರು.

ಆರ್​ಎಸ್​ಎಸ್ ನಿಷೇಧಿಸುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲೀಶತನದ್ದಾಗಿದೆ. ಆರ್​ಎಸ್​ಎಸ್ ಬಗ್ಗೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರನ್ನು ನೋಡಿ ಕಾಂಗ್ರೆಸ್​ನವರು ಕಲಿಯಬೇಕಿದೆ ಎಂದರು.

ಆರ್​ಎಸ್​ಎಸ್ ನಿಷೇಧಿಸಲು ಹೋಗಿ ಇದುವರೆಗೆ ಅನೇಕ ಸರ್ಕಾರಗಳು ಕೈ ಸುಟ್ಟುಕೊಂಡಿವೆ. ಆರ್​ಎಸ್​ಎಸ್ ನಿಷೇಧಿಸುವುದೂ ಒಂದೇ, ಆಕಾಶದತ್ತ ಮುಖ ಮಾಡಿ ಉಗುಳುವುದೂ ಒಂದೇ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net