ಸಮುದಾಯ ಭವನ ಸದ್ಬಳಕೆಯಾಗಲಿ

12ATHANIGRAMIN3
Published on

ಅಥಣಿ ಗ್ರಾಮೀಣ: ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಲಾಗುತ್ತದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖಂಡ ಚಿದಾನಂದ ಸವದಿ ಹೇಳಿದರು.

ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದ ಶ್ರೀ ಅರಣ್ಯಸಿದ್ಧೇಶ್ವರ ದೇವಾಲಯಕ್ಕೆ ನಿರ್ಮಿಸುತ್ತಿರುವ ಸಮುದಾಯಭವನ ಕಟ್ಟಡ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶಾಸಕ ಲಕ್ಷ್ಮಣ ಸವದಿ ಸದಾ ಬದ್ಧರಾಗಿದ್ದಾರೆ ಎಂದು ತಿಳಿಸಿದರು.

ಅರ್ಚಕ ಶಿವಶಂಕರಯ್ಯ ಮಠದ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ದುಂಡಪ್ಪ ಸಾವಡಕರ, ಗಂಗಪ್ಪ ಬಿಳ್ಳೂರ, ಕನಗೌಡ ಪಾಟೀಲ, ಪ್ರವೀಣ ಮಠಪತಿ, ಭೀಮಪ್ಪ ಹಂಚಿನಾಳ, ಮುರಗೇಪ್ಪ ಸಾವಡಕರ, ಭೂಪಾಲ ನಿಂಬಿಗಿಡದ, ಶೇಖರ ಗೋಧಿ, ಚನ್ನಪ್ಪ ಸಾವಡಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net