

ಬೈಲುಕುಪ್ಪೆ: ಕೇಂದ್ರ ಸರ್ಕಾರದ ಯೋಜನೆಯಾದ ಧರ್ತಿ ಆಬ ಜನ ಬಾಧಾರಿ ಅಭಿಯಾನದಡಿ ಸಿಗುವ ಸವಲತ್ತುಗಳನ್ನು ಪರಿಶಿಷ್ಟ ಪಂಗಡದ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಅಧಿಕಾರಿ ಬಿ.ಚಂದ್ರಶೇಖರ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚದೇವನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಭಿಯಾನದ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇದೇ ಆವರಣದಲ್ಲಿ ಸೋಮವಾರದಿಂದ ಗುರುವಾರ ತನಕ ನಡೆಯುವ ಅಭಿಯಾನಕ್ಕೆ ತಾಲೂಕು ಪಂಚಾಯಿತಿ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಕುಟುಂಬ ಯೋಜನೆ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಜರಾಗಿ ಇಲ್ಲಿ ಸಿಗುವಂತ ಸವಲತ್ತುಗಳನ್ನು ತಿಳಿಸುವರು.
ರೇಷನ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಿಸನ್ ಕಾರ್ಡ್, ಜನಧನ ಬ್ಯಾಂಕ್ ಖಾತೆ, ವೃದ್ಧಾಪ್ಯ ವೇತನ, ವಿಧವೆ ವೇತನ, ವಿಶ್ವಕರ್ಮ ಮುದ್ರಾ ಸಾಲಗಳು, ಉದ್ಯೋಗ ಜೀವನ ಉಪಯೋಗ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ನವೀನ್‌ರಾವ್, ಬೈಲುಕುಪ್ಪೆ ಗ್ರಾಪಂ ಸದಸ್ಯರಾದ ಸುರೇಶ್, ಚಂದು, ಬೈಲುಕುಪ್ಪೆ ಪಿಡಿಒ ಬೋರೇಗೌಡ, ಆರೋಗ್ಯ ಇಲಾಖೆ ಶಶಿಧರ, ಪ್ರದೋಷ್, ಮಧುರ, ಆಶಾ, ಸುಶೀಲಾ, ಶಿಲ್ಪಾ, ಬೈಲುಕುಪ್ಪೆ ಗಿರಿಜನರ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಯಶೋದಮ್ಮ. ಗ್ರಾಪಂ ಸಿಬ್ಬಂದಿ ಕೃಷ್ಣ, ಭೈರವ, ಗ್ರಾಮದ ಮುಖಂಡ ಹನುಮಂತ ಇದ್ದರು.