

ಕುಂದಾಪುರ: ತಾಲೂಕಿಗೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಜುಲೈಯಲ್ಲಿ ಒಟ್ಟು 15,94,82,613 ರೂ. ಬಂದಿದ್ದು ಯುವನಿಧಿ ಅನುದಾನ ಬಂದಿಲ್ಲ. ಗೃಹಲಕ್ಷ್ಮೀಯಲ್ಲಿ 7,04,26,000 ರೂ., ಗೃಹಜ್ಯೋತಿಯಲ್ಲಿ 4,37,45,109 ರೂ., ಶಕ್ತಿ ಯೋಜನೆಯಲ್ಲಿ 2,55,27,659 ರೂ., ಅನ್ನಭಾಗ್ಯದಲ್ಲಿ 1,97,83,845 ರೂ. ಬಂದಿದೆ. ಈವರೆಗೆ ಒಟ್ಟು 396,70,81,852 ರೂ. ಬಂದಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಕೊಲ್ಲೂರಿನಿಂದ ಬೆಂಗಳೂರು, ಮೈಸೂರು ಮೊದಲಾದೆಡೆಗೆ ಬಸ್ ಬಿಡಬೇಕು. ಗ್ರಾವಾಂತರ ಪ್ರದೇಶಕ್ಕೆ ಸರ್ಕಾರಿ ಬಸ್ ಓಡಿಸುವ ಮೂಲಕ ಶಕ್ತಿ ಯೋಜನೆ ಪ್ರಯೋಜನ ಇನ್ನಷ್ಟು ಮಂದಿಗೆ ಸಿಗಬೇಕು. ಇದಕ್ಕಾಗಿ ಸರ್ಕಾರಕ್ಕೆ ಒತ್ತಡ ಹಾಕುವ ಕಾರ್ಯ ನಡೆಯುತ್ತಿದೆ. ಮರವಂತೆ ನಾಡ ಬಡಾಕೆರೆ ಬಸ್‌ಗೆ ತಾತ್ಕಾಲಿಕ ಅನುಮತಿ 15 ದಿನಗಳಲ್ಲಿ ದೊರೆಯಲಿದ್ದು, ಕುಂದಾಪುರ ಕೊಲ್ಲೂರು, ಗಂಗೊಳ್ಳಿ ಬೈಂದೂರು ಬಸ್‌ಗಾಗಿ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.
ಶಕ್ತಿ ಯೋಜನೆಯ ಟಿಕೆಟ್ ನೀಡಿ ಇಳಿಯುವಾಗ ಕೆಲವು ಕಂಡಕ್ಟರ್‌ಗಳು ಮರಳಿ ಪಡೆಯುತ್ತಾರೆ. ಇದರಲ್ಲೇನೋ ಸಂಶಯ ಇದೆ ಎಂದು ಸವಿತಾ ಪೂಜಾರಿ ಆನಗಳ್ಳಿ ಹೇಳಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರ್ಣಯದ ಮನವಿ ಬಳಿಕ ಕೊಲ್ಲೂರಿನ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಶುಲ್ಕ ವಿಧಿಸಲಾಗುತ್ತಿಲ್ಲ. ಕೊಲ್ಲೂರು-ಮೈಸೂರು ಬಸ್ ಪುನಾರಂಭಕ್ಕೆ ಹುಣಸೂರು ಡಿಪೋದವರು ಪ್ರತಿಕ್ರಿಯಿಸಿಲ್ಲ. ಕೊಲ್ಲೂರಿಗೆ ಕುಂದಾಪುರದಿಂದ ಬಿಡುತ್ತಿದ್ದ ಬಸ್‌ಗೆ ನ್ಯಾಯಾಲಯದ ತಡೆ ಆದೇಶ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಹೇಳಿದರು.
ವಿದ್ಯುತ್ ಬಿಲ್ ತಡವಾಗಿ ನೀಡಿದರೆ ಗೃಹಜ್ಯೋತಿ ಗ್ಯಾರಂಟಿ ಸೌಲಭ್ಯ ಲಭಿಸುವುದಿಲ್ಲ ಎಂದು ಚಂದ್ರ ಕಾಂಚನ್ ಹೇಳಿದರು. ಮನೆ ನಿರ್ವಾಣಕ್ಕೆ ತಾತ್ಕಾಲಿಕ ವಿದ್ಯುತ್ ನಿಯಮಗಳನ್ನು ಈ ಹಿಂದಿನಿಂತೆಯೇ ಸಡಿಲಿಸಬೇಕು ಎಂದು ವಸುಂಧರ ಹೆಗ್ಡೆ, ನಾರಾಯಣ ಆಚಾರ್ ಕೋಣಿ, ಅರುಣ್ ಹೇಳಿದರು.
ಸದಸ್ಯರಾದ ಅಭಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ಗಣೇಶ್ ಕುಂಭಾಶಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮ್ಯಾನೇಜರ್ ರಾಮಚಂದ್ರ ಮಯ್ಯ ಸ್ವಾಗತಿಸಿದರು.