ಸಂಗೀತ ಸಾಧಕರಿಗೆ ಪ್ರಶಸ್ತಿ ಪ್ರದಾನ

mysore
Published on

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಲಕ್ಷ್ಮೀಪುರಂನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಆಯೋಜಿಸಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ಸಮಾರೋಪ ಕಾರ್ಯಕ್ರಮ ನಡೆಯಿತು

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.


ವಿದ್ವಾನ್ ಡಾ.ರಾ.ವಿಶ್ವೇಶ್ವರನ್, ವಾಗ್ಮಿ ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರ್, ವಿದ್ವಾನ್ ಡಾ.ರಾ.ಸ.ನಂದಕುಮಾರ್, ವಿಜಯವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ಎ.ಆರ್.ರಘುರಾಮ್ ಇನ್ನಿತರರಿದ್ದರು. ಇದಕ್ಕೂ ಮುನ್ನ ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರಿಂದ ವೀಣಾವಾದನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net