ಸಾಧಕ ನಾಯಕರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ

19-pnp 1
ಪಾಂಡವಪುರ ತಾಲೂಕಿನ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಚುನಾಯಿತ ವಿದ್ಯಾರ್ಥಿಗಳ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಲಿಂಗೇಗೌಡ ಉದ್ಘಾಟಿಸಿದರು. ಪ್ರಶಾಂತ್ ಎ.ನಾಯ್ಡು, ರಘುನಂದನ್, ಬಿ.ಎಸ್.ಕುಮಾರ್ ಇತರರು ಇದ್ದರು.
Published on

ಪಾಂಡವಪುರ: ಸಮಾಜದ ಎಲ್ಲ ಸ್ತರಗಳು ಮತ್ತು ವಿವಿಧ ಸಂಘಟನೆಗಳಲ್ಲೂ ಸಾಧನೆ ಮಾಡಿರುವ ನಾಯಕರು ನಮಗೆ ಸ್ಫೂರ್ತಿಯಾಗಲಿ ಎಂದು ಚಿನಕುರಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಲಿಂಗೇಗೌಡ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಮಿತಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ಸಹಯೋಗದೊಂದಿಗೆ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾಯಿತ ವಿದ್ಯಾರ್ಥಿಗಳ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹೀಗೆ ಒಬ್ಬ ಉತ್ತಮ ನಾಯಕನನ್ನು ರೂಪಿಸುವ ಹೊಣೆ ಹೊತ್ತಿರುವ ಎಸ್‌ಟಿಜಿ ಕಾಲೇಜು ಪಠ್ಯದೊಂದಿಗೆ ಪಠ್ಯೇತರ ಭಾಗವಾಗಿ ವಿದ್ಯಾರ್ಥಿಗಳಿಂದ ಚುನಾವಣೆ ನಡೆಸಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಪದಗ್ರಹಣ ಪ್ರತಿಜ್ಞೆ ಬೋಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹಂಚಿ ಅವರಲ್ಲಿರುವ ನಾಯಕತ್ವದ ಗುಣವನ್ನು ಗುರುತಿಸಿ ಹೊರತೆಗೆಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ನಾಯಕರಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪಕ್ಷಪಾತವಾಗಿ ಕೆಲಸ ಮಾಡದೇ ನಿಷ್ಪಕ್ಷಪಾತವಾಗಿ ತಮ್ಮ ಹೊಣೆಯನ್ನು ಹೊರಬೇಕು. ಅಷ್ಟೇ ಅಲ್ಲದೆ ನಾಯಕನಾದವನು ಮತ್ತಷ್ಟು ನಾಯಕರನ್ನು ಹುಟ್ಟುಹಾಕುವ ಗುಣವನ್ನು ಹೊಂದಿರಬೇಕು. ಆಗ ಮಾತ್ರ ಆತ ನಿಜವಾದ ನಾಯಕನಾಗುತ್ತಾನೆ ಎಂದು ಹೇಳಿದರು.

ಬಳಿಕ ಕಾಲೇಜು ಚುನಾವಣೆ ಅಧಿಕಾರಿ ಬಿ.ಎಸ್.ಕುಮಾರ ಪ್ರತಿಜ್ಞೆಯನ್ನು ಬೋಧಿಸಿದರು. ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಯೋಜಕ ರಘುನಂದನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net