ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆಗೈಯಲಿ

Oplus_131072
Oplus_131072
Published on

ರಾಮದುರ್ಗ: ತಾಳ್ಮೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಟನೆ ಕಲೆ ವೃದ್ಧಿಸುವಲ್ಲಿ ಜುಡೋ ಕ್ರೀಡೆ ಸಹಕಾರಿಯಾಗಿದೆ. ಈಗಾಗಲೇ ನಮ್ಮ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲೂ ಸಾಧನೆಗೈಯಲಿ ಎಂದು ಸ್ಪೋಕೋ ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ ಹೇಳಿದರು.

ತಾಲೂಕಿನ ಚಂದರಗಿ ಕ್ರೀಡಾ ಶಾಲೆಯಲ್ಲಿ ಬೆಂಗಳೂರಿನ ಕರ್ನಾಟಕ ಜುಡೋ ಸಂಸ್ಥೆ ಹಾಗೂ ಸ್ಪೋಕೋ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಲಕ&ಬಾಲಕಿಯರ 42ನೇ ರಾಜ್ಯ ಸಬ್​ ಜ್ಯೂನಿಯರ್​ ಮತ್ತು ಮಿನಿ ಕ್ಯಾಟಗರಿ ಜುಡೋ ಚಾಂಪಿಯನ್​ಶಿಪ್​ ಉದ್ಘಾಟಿಸಿ ಮಾತನಾಡಿದರು. ವ್ಯಾಯಾಮ ಹಾಗೂ ಕ್ರಿಯಾತ್ಮಕ ಕಾರ್ಯ ಚಟುವಟಿಕೆಗಳಿಂದ ಸದೃಢ ದೇಹ, ಮನಸ್ಸು ಹೊಂದಲು ಸಾಧ್ಯವಗಾಗುತ್ತದೆ. ಹೀಗಾಗಿ, ಸದೃಢತೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಸ್​.ಎಂ.ಕಲೂತಿ ಅವರು 1983ರಲ್ಲಿ ಸ್ಪೋಕೋ ಸಂಸ್ಥೆ ಪ್ರಾರಂಭಿಸಿದ್ದು, ದೇಶಕ್ಕೆ ನೂರಾರು ಕ್ರೀಡಾಪಟುಗಳನ್ನು ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ನಮ್ಮ ಸಂಸ್ಥೆ ಖೇಲೋ ಇಂಡಿಯಾ ಯೋಜನೆಡಿ ಸೈಕ್ಲಿಂಗ್​, ಕುಸ್ತಿ, ಅಥ್ಲೆಟಿಕ್ಸ್​ ಹಾಗೂ ಖೋಖೋ ಕ್ರೀಡೆಗಳಲ್ಲಿ ಮಾನ್ಯತೆ ಪಡೆದಿದೆ. ಪ್ರಸಕ್ತ ವರ್ಷದ ನವೀಕರಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜುಡೋ ಸಂಸ್ಥೆ ಅಧ್ಯ, ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಜುಡೋ ಕ್ರೀಡೆ ಪರಿಚಯಿಸಲು ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸ್ಪೋಕೋ ಸಂಸ್ಥೆ ಸಂಸ್ಥಾಪಕ ಎಸ್​.ಎಂ.ಕಲೂತಿ, ಉಪಾಧ್ಯ ಮಹೇಶ ಭಾತೆ, ಜಿಲ್ಲಾ ಜುಡೋ ಸಂಸ್ಥೆ ಗೌರವ ಕಾರ್ಯದರ್ಶಿ ವಿಕ್ರಮ ಕದಂಪಾಟೀಲ, ಆರ್​.ಎ.ಪಾಟೀಲ, ರಾಜೇಶ್ವರಿ ಯಾದವಾಡ, ಕೆ.ಎಸ್​.ಉಮರಾಣಿ, ಎಸ್​.ಜಿ.ಮಡಿವಾಳ, ಎಸ್​.ಆರ್​.ನವರಕ್ಕಿ, ಎಸ್​.ಆರ್​.ಮೇತ್ರಿ, ಪೃಥ್ವಿ ಜಾಧವ ಇತರರಿದ್ದರು. ಜುಡೋ ಕಾರ್ಯದರ್ಶಿ ಎಸ್​.ಆರ್​.ಶಿವಾನಂದ ಸ್ವಾಗತಿಸಿದರು. ಶಿವಂ ಜೋಶಿ ನಿರೂಪಿಸಿದರು. ದೇವಾಶ್ವರಿ ಕದಂ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net