

ಕುಳಗೇರಿ ಕ್ರಾಸ್: ಸಿದ್ಧೇಶ್ವರ ಶ್ರೀಗಳು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರು, ಅವರ ಜ್ಞಾನ ಭಂಡಾರ ಎಲ್ಲರ ಮನದಲ್ಲಿ ನೆಲೆಸಿದೆ ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಗೋವನಕೊಪ್ಪ ಬ್ರಹ್ಮಾನಂದ ಪರಮಹಂಸರ ಜೀವನ ದರ್ಶನ ಪ್ರವಚನದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಗಳ ನಿಸ್ವಾರ್ಥ ಸೇವೆ, ಸರಳ ಬದುಕು ಎಲ್ಲರಿಗೂ ದಾರಿದೀಪವಾಗಿದೆ. ಅವರ ಹಾದಿಯಲ್ಲಿಯೇ ನಡೆದ ಅನೇಕ ಸಂತರು ಶರಣರು ಇಂದು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಿತ್ತಲಿ ಸಿದ್ರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಪ್ರತಿ ಕ್ಷಣವೂ ಅತ್ಯಮೂಲ್ಯ. ತಾಯಂದಿರು ಮಕ್ಕಳಿಗೆ ಮಹಾತ್ಮರ ಚರಿತ್ರೆ, ದೇಶದ ಇತಿಹಾಸ ಹಾಗೂ ಸಂಸ್ಕೃತಿ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಎಸ್.ಉಮಾಪತಿ ಶಾಸಿಗಳು, ಎಸ್.ಅಕ್ಕಮಹಾದೇವಿ, ಕಿಷ್ಟಣ್ಣ ಬಿಜಾಪೂರ, ನಿಂಗನಗೌಡ ಪಾಟೀಲ, ಮುರಳಿಧರ ಯಡನ್ನವರ, ದಾವಲಸಾಬ ಹೊಸಮನಿ, ಪ್ರದೀಪ ಮೇಟಿ, ಬಿ.ಜಿ. ಪಟ್ಟಣಶೆಟ್ಟಿ, ಹನಮಂತಪ್ಪ ಧಳಪತಿ ಮತ್ತಿತರರಿದ್ದರು.
ಶರಣು ಕರಕಿಕಟ್ಟಿ ಸ್ವಾಗತಿಸಿದರು, ರಾಘವೇಂದ್ರ ಕಂದಗಲ್ ನೀರೂಪಿಸಿದರು ಹಾಗೂ ಮಂಜು ದ್ಯಾವನ್ನವರ ವಂದಿಸಿದರು.