ಸಹಕಾರಗಳಿಂದ ಸಮಾಜ ಅಭಿವೃದ್ಧಿಯೂ ಆಗಲಿ

13brg1
Published on

ಬೋರಗಾಂವ: ಸಹಕಾರ ಸಂಘಗಳು ಆರ್ಥಿಕ ಪ್ರಗತಿಯ ಜತೆಗೆ ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧೇಶ್ವರ ಕೋ&ಆಪ್​ ಕ್ರೆಡಿಟ್​ ಸೊಸೈಟಿ 26ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಅಣ್ಣಾಸಾಹೇಬ ಹವಲೆ ಅವರ ಬೋರಗಾಂವ ಸಿದ್ಧೇಶ್ವರ ಸಂಸ್ಥೆಯಿಂದ ಮಾದರಿ ಕಾರ್ಯಗಳು ನಡೆಯುತ್ತಿವೆ ಎಂದರು.

ಸಂಸ್ಥೆ ಸಂಸ್ಥಾಪಕ ಅಣ್ಣಾಸಾಹೇಬ ಹವಲೆ ಮಾತನಾಡಿ, ಶ್ರೀದಲ್ಲೇ ಉಗಾರ, ಕಾಗವಾಡ, ಕುರ್ಲಿ ಗ್ರಾಮದಲ್ಲಿ ಶಾಖೆ ಪ್ರಾರಂಭಿಸಲಾಗುವುದು. ಸಂಸ್ಥೆ 3,656 ಸದಸ್ಯರು, 1.49 ಕೋಟಿ ರೂ. ಷೇರು ಬಂಡವಾಳ, 13.35 ಕೋಟಿ ರೂ. ನಿಧಿ, 136.76 ಕೋಟಿ ರೂ. ಠೇವಣಿ ಸಂಗ್ರಹಿಸಿ, 61.84 ಕೋಟಿ ರೂ. ಸಾಲ ವಿತರಿಸಿದೆ. 81.9 ಕೋಟಿ ರೂ. ಹೂಡಿಕೆ ಮಾಡಿ 2.26 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಶೇ.16 ಲಾಭಾಂಶ ವಿತರಿಸಲಿದೆ ಎಂದರು.

ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಶಿವಾಜಿ ಮಾಳಿ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಸಿ.ಎಸ್​.ಪಾಟೀಲ ವರದಿ ಓದಿದರು. ಮಾಜಿ ಶಾಸಕ ಸುಭಾಷ ಜೋಶಿ, ಯುವನಾಯಕ ಸುಜಯ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅರುಣ ದೇಸಾಯಿ, ಅನೂಜ ಹವಲೆ, ಶ್ರೇಣಿಕ ಮಗದುಮ್ಮ, ಟಿ.ಆರ್​.ಪಾಟೀಲ, ಅರವಿಂದ ಖರಾಡೆ, ಮಲ್ಲು ಹಂಡೆ, ಮಹಾವೀರ ಪಾಟೀಲ, ವಕೀಲ ಗುಳಗುಳೆ, ಸಂತೋಷ ಹವಲೆ, ಪ.ಪಂ ಸದಸ್ಯ ರೋಹಿತ ಪಾಟೀಲ, ಪಿ.ಎಂ.ಭೋಜೆ, ರಾಜು ಖಿಚಡೆ, ಸುಜಿತ ಕುಯಿಕ, ಭಾವುಸಾಬ ಪಾಟೀಲ, ಸಂಸ್ಥೆ ಉಪಾಧ್ಯಕ್ಷ ಸುಕುಮಾರ ಚಿಪರೆ, ವಿಧ್ಯಾದರ ಅಮ್ಮನ್ನವರ, ಅದಗೌಡಾ ಪಾಟೀಲ, ಶಿವಪ್ಪ ಮಾಳಗೆ, ಸುರೇಂದ್ರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net